ಫ್ಯಾಷನ್​ ಡಿಸೈನರ್ ರನ್ನು ಕೊಚ್ಚಿ ಕೊಂದ ಮನೆಕೆಲಸದವರು..!

3:15 PM, Thursday, November 15th, 2018
Share
1 Star2 Stars3 Stars4 Stars5 Stars
(No Ratings Yet)
Loading...

fasion-designerಡೆಲ್ಲಿ: ದೇಶದ ರಾಜಧಾನಿ ದೆಹಲಿಯಲ್ಲಿ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ. ಮನೆಯಲ್ಲೇ ಕೆಲಸಮಾಡುತ್ತಿದ್ದ ಆಳುಗಳು ಫ್ಯಾಷನ್ ಡಿಸೈನರ್ ಒಬ್ಬರನ್ನ ಕೊಚ್ಚಿ ಕೊಲೆಮಾಡಿರುವ ಘಟನೆ ನಡೆದಿದೆ.

ಹೌದು, ವಸಂತ್ಕುಂಜ್ ನಿವಾಸಿ 53 ವರ್ಷದ ಮಾಲಾ ಲಖಾನಿ ಫ್ಯಾಶನ್ ಡಿಸೈನರ್ನನ್ನು ಆಕೆಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆಳುಗಳೇ ಕೊಚ್ಚಿ ಕೊಲೆಮಾಡಿದ್ದಾರೆ. ಇಷ್ಟೇ ಅಲ್ಲದೇ ಆಕೆಯ ಸಹಾಯಕ್ಕೆ ಬಂದ ಮನೆ ಕಾಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಬಹುದ್ದೂರ್ ಸಿಂಗ್ (42)ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು.

ಇನ್ನು ಈ ಸುದ್ದಿ ಪೊಲೀಸರಿಗೆ ತಿಳಿದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಫ್ಯಾಶನ್ ಡಿಸೈನರ್ ಶವ ಬೆಡ್ ರೂಂನಲ್ಲಿ ಇದ್ದರೇ, ಸೆಕ್ಯೂರಿಟಿ ಗಾರ್ಡ್ ಬಹದ್ದೂರ್ ಸಿಂಗ್ ಮೃತ ದೇಹ ಗಾರ್ಡನ್ನಲ್ಲಿ ಕಂಡ ಬಂದಿದೆ.

ಪ್ರಾಥಮಿಕ ತನಿಖೆ ಪ್ರಕಾರ, ಮನೆ ಯಜಮಾನಿ ಮನೆಗೆಲಸದವರಿಗೆ ಸಂಬಳವನ್ನು ತಡವಾಗಿ ನೀಡುತ್ತಿದ್ದು, ಇದರಿಂದ ಬೇಸರಗೊಂಡು ಕೊಲೆ ಮಾಡಿ ಪರಾರಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಇನ್ನು ಈ ಘಟನೆ ಕುರಿತು ವಸಂತ್ಕುಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೂವರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English