ಇಂಡಿಯನ್​ ಪ್ರೀಮಿಯರ್​ ಲೀಗ್: ಈ ಮೂವರು ಸ್ಟಾರ್​ ಪ್ಲೇಯರ್ಸ್​ ಕೈಬಿಡಲು ಪ್ರಾಂಚೈಸಿಗಳ ನಿರ್ಧಾರ..!

4:39 PM, Thursday, November 15th, 2018
Share
1 Star2 Stars3 Stars4 Stars5 Stars
(No Ratings Yet)
Loading...

manish-pandeyಮುಂಬೈ: ಕಳೆದ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ದುಬಾರಿ ಬೆಲೆ ನೀಡಿ ಸ್ಟಾರ್ ಪ್ಲೇಯರ್ಸ್ ಖರೀದಿ ಮಾಡಿದ್ದ ಕೆಲ ಪ್ರಾಂಚೈಸಿಗಳು ಕೈಸುಟ್ಟುಕೊಂಡಿದ್ದು ಗೊತ್ತೇ ಇದೆ. ಇದೇ ಕಾರಣಕ್ಕಾಗಿ ಈ ಸಲ ಅವರನ್ನ ತಂಡದಿಂದ ಕೈಬಿಡಲು ಪ್ರಮುಖ ಪ್ರಾಂಚೈಸಿಗಳು ನಿರ್ಧಾರ ಮಾಡಿರುವ ಹಾಗೇ ಕಾಣಿಸುತ್ತದೆ.

2018ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ದುಬಾರಿ ಬೆಲೆಗೆ ಬಿಕರಿಯಾಗಿದ್ದ ಕನ್ನಡಿಗರಾದ ಮನೀಷ್ ಪಾಂಡೆ, ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ ಹಾಗೂ ಜಯದೇವ್ ಉನ್ಕದತ್ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನು ಏನು ನೀಡಿಲ್ಲ. ಹೀಗಾಗಿ ಈ ಸಲ ಅವರನ್ನ ಪ್ರಾಂಚೈಸಿಗಳು ಕೈಬಿಡಲು ನಿರ್ಧಾರ ಮಾಡಿವೆ ಎಂದು ತಿಳಿದು ಬಂದಿದೆ.

11 ಕೋಟಿ ರೂ ನೀಡಿ ಸನ್ರೈಸರ್ಸ್ ಹೈದರಾಬಾದ್ ಮನೀಷ್ ಪಾಂಡೆ, ಅದೇ ರೀತಿ ರಾಜಸ್ಥಾನ ರಾಯಲ್ಸ್ ತಂಡ ಆಲ್ರೌಂಡರ್ ಬೆನ್ ಸ್ಟೋಕ್ಸ್(12.5 ಕೋಟಿ) ಹಾಗೂ ಜಯದೇವ್ ಉನ್ಕದತ್ (11.5 ಕೋಟಿ ) ಅವರನ್ನ ತಮ್ಮ ತಮ್ಮ ತಂಡದಿಂದ ಕೈಬಿಡಲು ನಿರ್ಧರಿಸಿದ್ದಾಗಿ ತಿಳಿದು ಬಂದಿದೆ. ಕಳೆದ ಬಿಡ್ಡಿಂಗ್ನಲ್ಲಿ ಈ ಇಬ್ಬರು ಪ್ಲೇಯರ್ ಅತಿ ದುಬಾರಿ ಬೆಲೆಗೆ ಬಿಕರಿಯಾಗಿದ್ದರು.

ಇನ್ನು ಕನ್ನಡಿಗ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿರುವ ಕಾರಣ ಪಂಜಾಬ್ ತಂಡ ಅವರನ್ನ ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ. ಎಲ್ಲ ಪ್ರಾಂಚೈಸಿಗಳು ಯಾವ ಯಾವ ಆಟಗಾರರನ್ನ ತಂಡದಿಂದ ಕೈಬಿಡಲು ನಿರ್ಧರಿಸಿವೆ ಎಂಬ ಮಾಹಿತಿ ನೀಡಲು ಇಂದು ಕೊನೆ ದಿನವಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English