ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ನಡೆಯುವ ಆಳ್ವಾಸ್ ವಿದ್ಯಾರ್ಥಿ ಸಿರಿ ವಿದ್ಯಾರ್ಥಿ ಸಾಹಿತ್ಯ-ಸಂಸ್ಕೃತಿ ಸಮ್ಮೇಳನವನ್ನು ಹಿರಿಯ ನಟಿ ವಿನಯ ಪ್ರಸಾದ್ ಇಂದು ಬೆಳಗ್ಗೆ ಮೂಡುಬಿದಿರೆಯಲ್ಲಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿ ಸಿರಿ ಅಂದರೆ ಬರೀ ಮಾರ್ಕ್ಸ್ ಮಟ್ಟಿಗೆ ಮಾತ್ರ ಅಲ್ಲ. ಮನುಷ್ಯತ್ವದ ರೂಪದಲ್ಲಿ ಕೂಡಾ ಅದು ಸಾಕಾರಗೊಳ್ಳಬೇಕು. ಮನೆಗೆ ಉಪಕಾರಿಗಳಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಆಳ್ವಾಸ್ ವಿದ್ಯಾರ್ಥಿ ಸಿರಿಯ ರೂವಾರಿ ಡಾ.ಎಂ.ಮೋಹನ್ ಆಳ್ವ, ನುಡಿಸಿರಿಯ ಆಯೋಜನೆಯ ಬಗ್ಗೆ ಮಾತನಾಡಿದರು. ಕಾಸರಗೋಡಿನ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿನಿ ಸನ್ನಿಧಿ ಟಿ. ರೈ ಪೆರ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆಳ್ವಾಸ್ ವಿದ್ಯಾರ್ಥಿ ಸಿರಿ ಪುರಸ್ಕಾರವನ್ನು ಮಕ್ಕಳ ರಂಗಭೂಮಿ ವಿನ್ಯಾಸಕಾರ ಮೂರ್ತಿ ದೇರಾಜೆ, ಬಾಲಪ್ರತಿಭೆ ಮಾ.ಸದ್ಗುಣ ಐತಾಳ್, ಹಿರಿಯ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ, ಸಾನಿಧ್ಯ ವಿಶೇಷ ಮಕ್ಕಳ ವಸತಿ ಶಾಲೆ ಇವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನಾಧ್ಯಕ್ಷೆ, ಉದ್ಘಾಟಕರು ಹಾಗೂ ಅತಿಥಿಗಳನ್ನು ವೈಭವದ ಮೆರವಣಿಗೆ ಮೂಲಕ ಕರೆ ತರಲಾಯಿತು. ಬಳಿಕ ಶಾಲಾ ಮಕ್ಕಳಿಂದ ವಿಚಾರಗೋಷ್ಠಿಗಳು ನಡೆದವು.
Click this button or press Ctrl+G to toggle between Kannada and English