ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ ಗೆ ಚಾಲನೆ

6:50 PM, Friday, November 16th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

alvas-nudisiri 18ಮೂಡುಬಿದಿರೆ : ಖ್ಯಾತ ಸಂಶೋಧಕ ಡಾ.ಷ.ಶೆಟ್ಟರ್  ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  15ನೆ ವರ್ಷದ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ ಯನ್ನು ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಸಂತ ಶಿಶುನಾಳ ಶರೀಫ ಸಭಾಂಗಣದ ರತ್ನಾಕರವರ್ಣಿ ವೇದಿಕೆಯಲ್ಲಿ ಉದ್ಘಾಟಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಮೋಹನ್ ಆಳ್ವ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು.

alvas-nudisiri 18ಬಳಿಕ ಮಾತನಾಡಿದ ಷ.ಶೆಟ್ಟರ್ ನಾಲ್ಕನೇ ಶತಮಾನದ ಆರಂಭದಲ್ಲೇ ಕನ್ನಡ ಭಾಷೆಯ ಉಗಮವಾಗಿದೆ, ಆದುದರಿಂದ ಹಲ್ಮಿಡಿ ಶಾಸನದಿಂದ ಆಯಿತು ಎನ್ನುವುದು ಅರ್ಧ ಸತ್ಯ.ಇದನ್ನು ಪುನರ್ ಪರಿಶೀಲನೆ ಮಾಡಬೇಕಾದ ಅಗತ್ಯವಿದೆ ಎಂದರು. ತೆಲುಗು ಲಿಪಿಕಾರಾರು ಮೊದಲು ಬಳಸುತ್ತಿದ್ದುದು ಕನ್ನಡ ಲಿಪಿಯನ್ನೇ. ಹದಿಮೂರನೇ ಶತಮಾನದವರೆಗೂ ಅವರು ಕನ್ನಡ ಲಿಪಿಯನ್ನೇ ಬಳಸಿದ್ದರು. ಆ ನಂತರ ತೆಲುಗು ಲಿಪಿಯನ್ನು ಲಿಪಿಕಾರರು ಕಂಡುಹಿಡಿದರು, ಸಂಸ್ಕೃತದ ಮೇಲೂ ಕನ್ನಡದ ಪ್ರಭಾವವಿದೆ. ಆದರೆ ಅದನ್ನು ಗುರುತಿಸುವಲ್ಲಿ ವಿಫಲರಾಗಿದ್ದೇವೆ ಎಂದರು.

ಸಂಶೋಧಕರು ಆಳವಾದ ಅಧ್ಯಯನ ಮಾಡಬೇಕು. ಆಕರ ಗ್ರಂಥಗಳನ್ನು ಸಿದ್ದ ಮಾದರಿಯಾಗಿಸುವುದು ಬೇಡ. ಸಂಶೋಧಕರು ಎಚ್ಚರಿಕೆಯಿಂದಿದ್ದರೆ ಸಂಸ್ಕೃತಿಯ ಬೇರನ್ನು ಪತ್ತೆ ಹಚ್ಚಬಹುದು ಏಕತ್ವದ ಸಂಸ್ಕೃತಿ ಸಮಾಜಕ್ಕೆ ಅಪಾಯ. ಬಹುಭಾಷೆಗಳು ಒಗ್ಗೂಡಿದಾಗ ಬಹುತ್ವದ ಸಂಸ್ಕೃತಿಗೆ ಬುನಾದಿ ಹಾಕಲು ಸಾಧ್ಯ ಎಂದರು.

alvas-nudisiri 18ಈ ಶತಮಾನ ಅಸಹಿಷ್ಣುತೆಯ ಶತಮಾನ ನಮಗಿಂದು ಧರ್ಮದ ಸ್ವಾತಂತ್ರವಿಲ್ಲ, ಲಾಠಿ, ಪಿಸ್ತೂಲ್ ಎಲ್ಲೆಡೆ ಮೇಳೈಸುತ್ತದೆ. ಹೀಗಾಗಿ ಎಲ್ಲಿದೆ ಸಹಿಷ್ಣುತೆ. ಅರಸೊತ್ತಿಗೆಯ ಕಾಲದಲ್ಲೂ ವಾಕ್ ಸ್ವಾತಂತ್ರವಿತ್ತು. ಯಾವ ಕೃತಿಯೂ ನಿಷೇಧಕ್ಕೊಳಗಾಗಿರಲಿಲ್ಲ. ಆದರೆ ಈಗಿನ ಪ್ರಜಾಪ್ರಭುತ್ವದಲ್ಲಿ ಯಾವುದು ಸರಿ, ಯಾವುದು ತಪ್ಪುಎಂದು ಸರಕಾರ ನಿರ್ಧರಿಸುತ್ತಿದೆ. ಕೃತಿಕಾರರ ಮೇಲೆ ಎಗ್ಗಿಲ್ಲದೆ ದಾಳಿ ನಡೆಯುತ್ತಿರುವುದು ವಿಷಾದನೀಯ ಎಂದರು.

‘ಕರ್ನಾಟಕ ದರ್ಶನ: ಬಹುರೂಪಿ ಆಯಾಮಗಳು’ ಎಂಬ ಪರಿಕಲ್ಪನೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷೆ ಸಾಹಿತಿ, ಸಂಶೋಧಕಿ ಡಾ.ಮಲ್ಲಿಕಾ ಎಸ್.ಘಂಟಿ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಕಾಲ ಆಳ್ವಾಸ್ ನುಡಿಸಿರಿ ನಡೆಯಲಿದೆ .

alvas-nudisiri 18

ಈ ಸಂದರ್ಭ ಶಾಸಕ ಎ.ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್, ಅಮರನಾಥ ಶೆಟ್ಟಿ, ಕಸಾಪ , ಕನ್ನಡ ರಾಜ್ಯ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಶಶಿಧರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

alvas-nudisiri 18

alvas-nudisiri 18

alvas-nudisiri 18

alvas-nudisiri 18

alvas-nudisiri 18

alvas-nudisiri 18

alvas-nudisiri 18

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English