ಮಂಗಳೂರು : ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮವನ್ನು ದಿನಾಂಕ ಭಾನುವಾರ ರಂದು ಪೂರ್ವಾಹ್ನ 11.30ಕ್ಕೆ ಸರಿಯಾಗಿ ಮಂಗಳೂರಿನ ಲಾಲ್‌ಬಾಗ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಚೈಲ್ಡ್‌ಲೈನ್ ಸೆ ದೋಸ್ತಿ ಸಪ್ತಾಹ-2018 ರ ಅಂಗವಾಗಿ ಆಯೋಜಿಸಲಾಯಿತು ಹಾಗೂ ಸಾರ್ವಜನಿಕರ ಕೈ ಬೆರಳಿಗೆ ಬಿಳಿ ಬಣ್ಣವನ್ನು ಲೇಪಿಸುವ ಮೂಲಕ ಲೈಂಗಿಕ ದೌರ್ಜನ್ಯವನ್ನು ವಿರೋಧಿಸುತ್ತೇವೆ ಎಂಬ ದ್ಯೇಯವಾಕ್ಯದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಶಿಕ್ಷಣ ಸಂಪನ್ಮೂಲ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪ್ರೇಮಿ ಪೆರ್ನಾಂಡಿಸ್‌ರವರು ಹಾಗೂ ಕೆ.ಎಸ್.ಆರ್.ಟಿ ಇಲಾಖಾ ಸಿಬ್ಬಂಧಿಗಳು ಕಾರ್ಯಕ್ರಮವನ್ನು ಉದ್ಗಾಟಿಸಿದರು.
ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷರಾಗಿರುವ ಶ್ರಿಮತಿ ಪ್ರೇಮಿ ಪೆರ್ನಾಂಡಿಸ್ ರವರು ಮಾತನಾಡುತ್ತಾ ಮಂಗಳೂರು ಚೈಲ್ಡ್‌ಲೈನ್ ತಂಡವು ಚೈಲ್ಡ್‌ಲೈನ್ ಸೇ ದೋಸ್ತಿ-2018 ರ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಮಕ್ಕಳ ಸಮಸ್ಯೆಗಳ ಕುರಿತು ಅರಿವನ್ನು ಮೂಡಿಸುತ್ತಿದ್ದಾರೆ ಅದೇ ರೀತಿ ಲೈಂಗಿಕ ದೌರ್ಜನ್ಯವು ಕೂಡ ಒಂದು ಕಾನೂನುಭಾಹಿರ ಅಫರಾಧವಾಗಿದ್ದರು ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ಇದ್ದರೂ ಕೂಡ ಇತ್ತಿಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನಾವು ನೋಡಿರುತ್ತೇವೆ. ಈ ಅಫರಾಧವನ್ನು ಕೇವಲ ಇಲಾಖೆಗಳು ಮಾತ್ರ ತಡೆಗಟ್ಟಲು ಸಾದ್ಯವಿಲ್ಲ ಸಾರ್ವಜನಿಕರೂ ಕೂಡ ಲೈಂಗಿಕ ದೌರ್ಜನ್ಯ ನಡೆಯದ ನಿಟ್ಟಿನಲ್ಲಿ ಮಾಹಿತಿಯನ್ನು ನೀಡಬೇಕಾಗುತ್ತದೆ ಹೀಗಾದಲ್ಲಿ ಮಾತ್ರ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಲು ಸಾಧ್ಯ ಎಂಬುದಾಗಿ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ನಿಲ್ದಾಣದ ಪ್ರಯಾಣಿಕರಿಗೆ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ವಿರೋಧಿಸುತ್ತೇನೆ ಎಂಬ ದ್ಯೇಯವಾಕ್ಯದೊಂದಿಗೆ ಸಾರ್ವಜನಿಕರ ಕೈ ಬೆರಳಿಗೆ ಬಿಳಿ ಬಣ್ಣವನ್ನು ಲೇಪಿಸುವ ಮೂಲಕ ಆಂದೋಲನವನ್ನು ನಡೆಸಲಾಯಿತು.
ಚೈಲ್ಡ್‌ಲೈನ್-1098 ರ ಸದಸ್ಯರಾದ ಕೀರ್ತಿಶ್‌ರವರು ಕಾರ್ಯಕ್ರಮನ್ನು ನಿರೂಪಿಸಿದರು ಹಾಗೂ ಕೇಂದ್ರ ಸಂಯೋಜಕರಾದ ದೀಕ್ಷಿತ್ ಅಚ್ರಪ್ಪಾಡಿರವರು ಸ್ವಾಗತಿಸಿದರು ಹಾಗೂ ತಂಡ ಸದಸ್ಯರಾದ ಶ್ರೀಮತಿ ಅಸುಂತಾರವರು ವಂದನಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಮಂಗಳೂರು ಕೆ.ಎಸ್.ಆರ್
Click this button or press Ctrl+G to toggle between Kannada and English