ಪತ್ರಕರ್ತರ ನಿವೇಶನಕ್ಕೆ ಶೀಘ್ರ ಕ್ರಮ: ಸಚಿವ ಖಾದರ್

11:04 PM, Sunday, November 18th, 2018
Share
1 Star2 Stars3 Stars4 Stars5 Stars
(No Ratings Yet)
Loading...

press houseಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ನಿವೇಶನಕ್ಕೆ ಸಂಬಂಧಿಸಿದ ಬೇಡಿಕೆಯನ್ನು ಇತ್ಯರ್ಥಗೊಳಿಸಲು ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ಸಚಿವರು ಮತ್ತು ಪತ್ರಕರ್ತರ ಜತೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಪತ್ರಕರ್ತರ ಸಂಘಕ್ಕೆ ಈ ಭರವಸೆ ನೀಡಿದರು.

ಸಮಾಜದ ಮುಖ್ಯ ಅಂಗವಾಗಿರುವ ಪತ್ರಕರ್ತರಿಗೆ ನಿವೇಶನ ಬೇಡಿಕೆಗೆ ಈಡೇರಿವು ಬಗ್ಗೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಗರಕ್ಕೆ ಬಂದಾಗ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಜತೆ ಮಾತನಾಡಿದ ಸಚಿವರು, ವಿಶೇಷ ಯೋಜನೆಯಡಿ ಪತ್ರಕರ್ತರ ನಿವೇಶಕ್ಕೆ ಸೂಕ್ತ ಜಾಗವನ್ನು ಗುರುತಿಸಿ ವರದಿ ನೀಡುವಂತೆ ಸೂಚನೆ ನೀಡಿದರು. ಇದು ಮಾತ್ರವಲ್ಲದೆ ದ.ಕ. ಜಿಲ್ಲೆಯ ಇತರ ತಾಲೂಕುಗಳಲ್ಲೂ ಕಾರ್ಯನಿರ್ವಹಿಸುವ ಪತ್ರಕರ್ತರಿಗೂ ನಿವೇಶನ ನೀಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸಚಿವರಿಗೆ ಮನವಿ ಹಸ್ತಾಂತರ ಮಾಡಿದರು.

ಸಭೆಯಲ್ಲಿ ರಾಜ್ಯ ಸಂಘದ ಕಾರ್ಯಕಾರಿ ಸದಸ್ಯ ಜಗನ್ನಾಥ್ ಶೆಟ್ಟಿ ಬಾಳ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಉಪಾಧ್ಯಕ್ಷ ಅನ್ಸರ್ ಇನೋಳಿ, ಕೋಶಾಧಿಕಾರಿ ಎ.ಆರ್. ಲೋಹಾನಿ, ಪ್ರೆಸ್‌ಕ್ಲಬ್‌ನ ಆಂತರಿಕ ಲೆಕ್ಕಪರಿಶೋಧಕ ಮುಹಮ್ಮದ್ ಆರೀಫ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಿಜಯ್ ಕೋಟ್ಯಾನ್, ಆರ್.ಸಿ. ಭಟ್, ಸುರೇಶ್ ಡಿ. ಪಳ್ಳಿ, ಆತ್ಮಭೂಷಣ್, ಜೀವನ್ ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English