ಮಂಗಳೂರು: ಖಾಸಗಿ ಸಂಸ್ಥೆಗೆ ಸೇರಿದ ಬೃಹತ್ ಗಾತ್ರದ ಲಾರಿ ಕಂಟೈನರ್ ಬಾಕ್ಸ್ಗಳು ಶಾಲೆಯೊಂದರ ಮೇಲೆ ಉರುಳಿಬಿದ್ದ ಘಟನೆ ಬೈಕಂಪಾಡಿ ಅಂಗರಗುಂಡಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅಂಗರಗುಂಡಿ ಸ.ಹಿ.ಪ್ರಾ. ಶಾಲೆಯ ಪಕ್ಕದ ಜಮೀನಿನಲ್ಲಿ ಎನ್ಎಂಪಿಟಿಯಿಂದ ತಂದ ಬೃಹತ್ ಗಾತ್ರದ ಕಂಟೈನರ್ಗಳನ್ನು ಸಂಗ್ರಹಿಸಿಟ್ಟು ಖಾಸಗಿ ಸಂಸ್ಥೆಯೊಂದು ವ್ಯವಹಾರ ನಡೆಸುತ್ತಿತ್ತು. ಇಂದು ಬೆಳಗ್ಗೆ ಶಾಲೆ ತೆರೆದ ಸಂದರ್ಭ ಶಾಲೆಯ ಒಂದು ಬದಿ ಕುಸಿದುಬಿದ್ದಿದೆ.
ಪರಿಶೀಲಿಸಿದಾಗ, ಪಕ್ಕದ ಜಮೀನಿನಲ್ಲಿದ್ದ ಒಂದರ ಮೇಲೊಂದು ಇರಿಸಿದ್ದ ಲಾರಿ ಕಂಟೈನರ್ಗಳು ಶಾಲೆಯ ಮೇಲೆಯೇ ಕುಸಿದು ಬಿದ್ದಿವೆ. ಪರಿಣಾಮ ಶಾಲೆಯ ಗೋಡೆ ಬಿರುಕು ಬಿಟ್ಟು, ಗೋಡೆಯ ಕೆಲವು ಕಲ್ಲುಗಳೂ ಉರುಳಿ ಬಿದ್ದಿವೆ. ಶಾಲೆಯ ಕಂಪೌಂಡ್ ಸಂಪೂರ್ಣ ಜಖಂಗೊಂಡಿದೆ.
ಸುದ್ದಿ ತಿಳಿದು ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಬೈಕಂಪಾಡಿಯ ಕಾರ್ಪೋರೇಟರ್ ಪುರುಷೋತ್ತಮ ಚಿತ್ರಾಪುರ ಸ್ಥಳಕ್ಕೆ ಭೇಟಿ ನೀಡಿ ಸಂಸ್ಥೆಯ ಮುಖ್ಯಸ್ಥರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ ಶಾಲಾ ಮಕ್ಕಳ ಪಾಲಕರು ಹಾಗೂ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶಾಲೆ ನಡೆಯುವ ಸಂದರ್ಭ ಘಟನೆ ನಡೆದಿದ್ದರೆ ಪ್ರಾಣಹಾನಿಯಾಗುವ ಸಂಭವವಿತ್ತು. ಕಂಟೈನರ್ ಸಂಗ್ರಹಿಸಲು ನೀಡಲಾಗಿದ್ದ ಪರವಾನಿಗೆಯನ್ನು ರದ್ದುಗೊಳಿಸಿ, ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದರು.
ಕುಸಿದಬಿದ್ದ ಶಾಲೆಯ ಗೋಡೆ ಹಾಗೂ ಕಂಪೌಂಡ್ಗಳನ್ನು ಪುನರ್ ನಿರ್ಮಿಸಿಕೊಡುವುದಾಗಿ ಕಂಟೈನರ್ ಸಂಗ್ರಾಹಕ ಸಂಸ್ಥೆ ಒಪ್ಪಿಕೊಂಡಿದೆ. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯಿನಿ ರವಿಕಲಾ ಶೆಟ್ಟಿ ಪಣಂಬೂರು ಠಾಣೆಗೆ ದೂರು ನೀಡಿದ್ದಾರೆ.
Click this button or press Ctrl+G to toggle between Kannada and English