ಬೆಂಗಳೂರು: ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಕೇರಳ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮೌರ್ಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಧರಣಿ ನಡೆಸಿದರು.
ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಅಯ್ಯಪ್ಪ ಭಕ್ತರು ಇಂದು ಸಂಕಷ್ಟದಲ್ಲಿ ಇದ್ದಾರೆ, ದೇವಸ್ಥಾನದಲ್ಲಿ ಇರಬೇಕಾದ ಭಕ್ತರು ಪೋಲಿಸ್ ಸ್ಟೇಷನ್ನಲ್ಲಿ ಇದ್ದಾರೆ, ಪೋಲಿಸ್ ಸ್ಟೇಷನ್ ಇರಬೇಕಾದ ಪೋಲಿಸರು ಅಯ್ಯಪ್ಪ ದೇವಸ್ಥಾನದಲ್ಲಿ ಇದ್ದಾರೆ ಎಂದು ಟೀಕಿಸಿದರು.
ಕೇರಳದ ಕಮ್ಯುನಿಸ್ಟ್ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಕೇಸ್ ನಡೆಯಬೇಕಾದರೆ ಮೌನವಹಿಸಿತು ಇದರ ಪರಿಣಾಮ ಇಂದು ಲಕ್ಷಾಂತರ ಅಯ್ಯಪ್ಪ ಭಕ್ತರು ನೀರು ,ಊಟವಿಲ್ಲದೇ ಬೀದಿಯಲ್ಲಿ ಬಿದ್ದಿದ್ದಾರೆ. ಅಯ್ಯಪ್ಪ ದೇವಸ್ಥಾನದಿಂದ ಕೂಟ್ಯಾಂತರ ರೂಪಾಯಿ ಆದಾಯ ಪಡೆಯುವ ಕೇರಳ ಸರ್ಕಾರ ಭಕ್ತರರಿಗೆ ಕನಿಷ್ಠ ಸೌಲಭ್ಯ ನೀಡಲ್ಲ .ಕಳೆದ ಒಂದು ತಿಂಗಳಿನಿಂದ ಕೇರಳದಲ್ಲಿ ಆತಂಕದ ಸ್ಥಿತಿಯಲ್ಲಿದೆ.
ಕೇರಳ ಸರ್ಕಾರ ಇಲ್ಲಿನ ವಸ್ತುಸ್ಥಿತಿ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿಲ್ಲ .ಅಯ್ಯಪ್ಪ ಭಕ್ತರ ಮೇಲೆ ಲಾಠಿ ಏಟು ಮತ್ತು ದೂರುಗಳನ್ನು ದಾಖಲು ಮಾಡಿ ಜೈಲಿಗೆ ಕಳುಹಿಸುತ್ತಿದ್ದಾರೆ. ಅಯ್ಯಪ್ಪ ಭಕ್ತರ ದೌರ್ಜನ್ಯ ಮಾಡುತ್ತಿರುವ ಕೇರಳ ಸರ್ಕಾರದ ವಿರುದ್ದ ರಾಜ್ಯಾದ್ಯಂತ ಪ್ರತಿಭಟನಾ ಧರಣಿ ಮಾಡಲಾಗುತ್ತಿದೆ ಎಂದರು.
ಶಬರಿಮಲೆ ಸಂರಕ್ಷಣಾ ಸಮಿತಿ, ಹಿಂದೂ ಜಾಗರಣೆ ವೇದಿಕೆ, ಭಜರಂಗದಳ ಸಹಯೋಗದಲ್ಲಿ ನಡೆಸ ಪ್ರತಿಭಟನೆಯಲ್ಲಿ ಪಿ.ಸಿ.ಮೋಹನ್ ,ಶಾಸಕ ಸಿ.ಎನ್.ಅಶ್ವಥನಾರಾಯಣ ,ವಿಧಾನಪರಿಷತ್ತು ಸದಸ್ಯ ರವಿಕುಮಾರ್ ಸೇರಿ ಹಲವರು ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English