ಮಂಗಳೂರು : ಪಿಣರಾಯಿ ವಿಜಯನ್ ಸರ್ಕಾರವು ಶಬರಿಮಲೆಯನ್ನು ನಿಯಂತ್ರಿಸಲು 10 ಸಾವಿರ ಪೊಲೀಸರನ್ನು ನಿಯೋಜಿಸಿದೆ. ಮಲೆಯಲ್ಲಿ ಭಕ್ತರು ಆರು ಗಂಟೆ ಮಾತ್ರ ಇರಬೇಕೆಂದು ನಿರ್ಬಂಧ ವಿಧಿಸಲಾಗಿದೆ. ಘೋಷಣೆ ಕೂಗಿದರೆ ಬಂಧಿಸುತ್ತಾರೆ. ಗುಂಪುಗೂಡಿದರೂ ಸೆರೆ ಹಿಡಿಯುತ್ತಾರೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಆರೋಪ ಮಾಡಿದರು.
ಕೇರಳದ ಎಡಪಕ್ಷಗಳ ಸರ್ಕಾರ ಶಬರಿಮಲೆಯನ್ನು ಮತ್ತೊಂದು ಜಲಿಯನ್ ವಾಲಾಬಾಗ್ ಮಾಡಲು ಹೊರಟಿದೆ ಎಂದು ಅವರು ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಣರಾಯಿ ವಿಜಯನ್ ಸರ್ಕಾರವು ಶಬರಿಮಲೆಯನ್ನು ಹಿಂದೂಗಳ ಧಾರ್ಮಿಕ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ರಾಜ್ಯಸಭಾ ಸದಸ್ಯ ವಿ.ಮುರಳೀಧರನ್ ಅವರೊಂದಿಗೆ ಶಬರಿಮಲೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ತಿಳಿದುಕೊಂಡಿದ್ದೇವೆ. ಭಕ್ತರಿಗೆ ತೊಂದರೆಯಾಗದಂತೆ ನಡೆದುಕೊಳ್ಳಲು ತಿರುವಾಂಕೂರು ದೇವಸ್ವಂ ಮಂಡಳಿ ಜತೆ ಮಾತನಾಡಿದ್ದೇವೆ. ಆದರೆ ಮಂಡಳಿ ಕೂಡ ಸರ್ಕಾರದ ಭಾಗವಾಗಿರುವ ಕಾರಣ ಅವುಗಳು ಕೂಡ ಎಡಪಕ್ಷಗಳ ಅಣತಿಯಂತೆ ನಡೆಯುತ್ತಿದೆ ಎಂದು ನಳಿನ್ ತಿಳಿಸಿದರು.
Click this button or press Ctrl+G to toggle between Kannada and English