ನವವಿವಾಹಿತೆ ಆತ್ಮಹತ್ಯೆಗೆ ಶರಣು: ಪತಿಯೇ ಕೊಲೆ ಮಾಡಿದ ಆರೋಪ

10:53 AM, Thursday, November 22nd, 2018
Share
1 Star2 Stars3 Stars4 Stars5 Stars
(No Ratings Yet)
Loading...

murderedಬೆಂಗಳೂರು: ನವವಿವಾಹಿತೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ.

ರೋಜಾ (18) ನೇಣು ಬಿಗಿದುಕೊಂಡವಳು. ಈಕೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ನಿವಾಸಿಯಾಗಿದ್ದು, 3 ತಿಂಗಳ ಹಿಂದೆ ರೋಜಾ ಮತ್ತು ಆಕೆಯ ಗಂಡ ಬಾಬಜಾನ್ ಬ್ಯಾಟರಯನಪುರ ಬಳಿ ವಾಸವಾಗಿದ್ದರು. ಬಾಗೇಪಲ್ಲಿ ನಿವಾಸಿಯಾದ ಬಾಬಜಾನ್ 1 ವರ್ಷದ ಹಿಂದೆ ರೋಜಾಳನ್ನ ಪ್ರೀತಿಸಿ ಜಾತಿ ವಿರೋಧದ ಮಧ್ಯೆಯು ಮದುವೆಯಾಗಿದ್ದು, ಬಳಿಕ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು. ಆದರೆ ನಿನ್ನೆ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ರೋಜಾ ನೇಣಿಗೆ ಶರಣಾಗಿದ್ದಾಳೆ.

ಇನ್ನು ಸುದ್ದಿ ತಿಳಿದ ಯುವತಿ ಪೋಷಕರು ಬೆಂಗಳೂರಿಗೆ ಆಗಮಿಸಿ ಮಗಳು ನೇಣು ಬಿಗಿದಿರುವ ಸ್ಥಿತಿ ನೋಡಿ ಆಕೆಯ ಗಂಡನೇ ಕೊಲೆ ಮಾಡಿರೋದಾಗಿ ಆರೋಪ ಮಾಡಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡು ಕೊಡಿಗೆಹಳ್ಳಿ ಪೊಲೀಸರು ಪತಿಯನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English