ದೇಶದ 121, ರಾಜ್ಯದ 8 ಜಿಲ್ಲೆಗಳ ಮನೆ ಮನೆಗೂ ಅನಿಲ ಸರಬರಾಜು

10:35 AM, Friday, November 23rd, 2018
Share
1 Star2 Stars3 Stars4 Stars5 Stars
(No Ratings Yet)
Loading...

narendra-modiನವದೆಹಲಿ: ದೇಶದ 121 ಜಿಲ್ಲೆ ಹಾಗೂ ರಾಜ್ಯದ 8 ಜಿಲ್ಲೆಗಳಲ್ಲಿ ಕೊಳವೆಗಳ ಮೂಲಕ ನೈಸರ್ಗಿಕ ಅನಿಲವನ್ನು (ಸಿಎನ್‌ಜಿ) ಮನೆ ಮನೆಗೂ ತಲುಪಿಸುವ ಯೋಜನೆಯಾದ ಅನಿಲ ವಿತರಣಾ ವ್ಯವಸ್ಥೆ (ಸಿಜಿಡಿ) ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಬಡವರಿಗೆ ಕಡಿಮೆ ಬೆಲೆಯಲ್ಲಿ ಎಲ್‌ಪಿಜಿ ಸಂಪರ್ಕ ಒದಗಿಸುವ ಕ್ರಾಂತಿಕಾರಿ ಯೋಜನೆ ಇದಾಗಿದೆ. ಮುಂದಿನ 3-4 ವರ್ಷಗಳಲ್ಲಿ ಕೊಳವೆ ಮೂಲಕ ನೈಸರ್ಗಿಕ ಅನಿಲ (ಸಿಎನ್‌ಜಿ) ಮನೆ ಮನೆಗೆ ವಿತರಿಸುವ ಯೋಜನೆಯನ್ನು ಸುಮಾರು 400 ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. ವಿತರಣಾ ಕೇಂದ್ರಗಳ ಸಂಖ್ಯೆಯನ್ನು 2020ರ ವೇಳೆಗೆ 10,000ಕ್ಕೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸಿಎನ್‌ಜಿ ಕೇಂದ್ರಗಳ ಸ್ಥಾಪನೆಯಿಂದ ಭಾರತದಲ್ಲಿ ಮಾಲಿನ್ಯವನ್ನು ನಿಯಂತ್ರಿಸಲು ಮತ್ತು ಹವಾಮಾನ ಬದಲಾವಣೆ ಕುರಿತಾದ ಪ್ಯಾರಿಸ್‌ ಒಪ್ಪಂದದ ನಿಬಂಧನೆಗಳ ಪಾಲನೆಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅನಿಲ ಸರಬರಾಜು ಜಾಲ ನಿರ್ಮಿಸುವುದಕ್ಕೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿಎನ್‌ಜಿಆರ್‌ಬಿ) ಈಗಾಗಲೇ 9ನೇ ಹರಾಜು ಪ್ರಕ್ರಿಯೆಯನ್ನು ಮುಗಿಸಿದೆ. 13 ರಾಜ್ಯಗಳ 121 ಜಿಲ್ಲೆ ಹಾಗೂ ರಾಜ್ಯದ ಆರು ಭೌಗೋಳಿಕ ವಲಯದ ವ್ಯಾಪ್ತಿಗೆ ಬರುವ ದಕ್ಷಿಣ ಕನ್ನಡ, ರಾಮನಗರ, ದಾವಣಗೆರೆ, ಬೀದರ್‌, ಉಡುಪಿ, ಚಿತ್ರದುರ್ಗ, ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲಿ ಸಿಜಿಡಿ ಕಾಮಗಾರಿ ಆರಂಭವಾಗಲಿದೆ. ಈ ಮೂಲಕ ದೇಶದ ಒಟ್ಟು ಶೇ. 70ರಷ್ಟು ಜನರಿಗೆ ಅನಿಲ ಪೂರೈಕೆಯಾಗಲಿದೆ.

10ನೇ ಹರಾಜು ಪ್ರಕ್ರಿಯೆಯಲ್ಲಿ ಚಿಕ್ಕಮಗಳೂರು, ಮಂಡ್ಯ, ಚಿಕ್ಕಮಗಳೂರು, ಬಾಗಲಕೋಟ, ರಾಯಚೂರು, ಕಲಬುರಗಿ, ವಿಜಯಪುರ, ಹಾಸನ, ಕೊಡಗು, ಮೈಸೂರು, ಉತ್ತರ ಕನ್ನಡ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳು ಸೇರ್ಪಡೆ ಆಗಲಿವೆ.

ಕೊಳವೆಗಳ ಮೂಲಕ ದಿನದ 24 ಗಂಟೆಯೂ ಮನೆ ಮನೆಗೂ ಅಡುಗೆ ಅನಿಲ ಪೂರೈಕೆ ಆಗಲಿದೆ. ಬಂಕ್‌ಗಳ ಮೂಲಕ ವಾಹನಗಳಿಗೆ ಸಿಎನ್‌ಜಿ ರವಾನೆ ಆಗಲಿದ್ದು, ಬಳಕೆಯಾದ ಅನಿಲಕ್ಕೆ ಅನುಗುಣವಾಗಿ ಶುಲ್ಕ ಪಾವತಿ ನಿಗದಿಪಡಿಸಲಾಗುತ್ತದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English