ತಂಗಿಯನ್ನು ಪ್ರೀತಿಸಬೇಡ ಅಂದಿದ್ದಕ್ಕೆ ಅಣ್ಣನಿಗೆ ಚಾಕು ಇರಿದ ಯುವಕ

2:41 PM, Saturday, November 24th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

thirtalliತೀರ್ಥಹಳ್ಳಿ : ಜೂನಿಯರ್ ಕಾಲೇಜಿನಲ್ಲಿ ಕಲಿಯುತ್ತಿದ್ದ ತನ್ನ ತಂಗಿಯನ್ನು ಪ್ರೀತಿಸ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಚಾಕುವಿನಿಂದ ಇರಿದ ಘಟನೆ ತೀರ್ಥಹಳ್ಳಿಯ ಸರ್ಕಾರಿ ಜೂನಿಯರ್ ಕಾಲೇಜು ಬಳಿ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಹೊಟ್ಟೆಯ ಬಲ ಭಾಗಕ್ಕೆ ಗಂಭೀರ ಗಾಯಗೊಂಡಿರುವ ಬಾಲಕನನ್ನು ತೀರ್ಥಹಳ್ಳಿಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

ಗಾಯಗೊಂಡವನನ್ನು ಯಡೇಹಳ್ಳಿ ಕೆರೆಯ ದರ್ಶನ್ ಎಂದು ಗುರುತಿಸಲಾಗಿದ್ದು ಚಾಕು ಇರಿದ ಆರೋಪಿ ಅವಿನ್ ಡಿಸೋಜ ಸ್ಥಳದಿಂದ ಪರಾರಿಯಾಗಿದ್ದು ಆತನ ಪತ್ತೆಗೆ ಪೋಲಿಸರು ಮುಂದಾಗಿದ್ದಾರೆ. ತೀರ್ಥಹಳ್ಳಿ ಜೂನಿಯರ್ ಕಾಲೇಜಿಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ದರ್ಶನ್ ಸಹೋದರಿಯನ್ನಅವಿನ್ ಡಿಸೋಜ ಪ್ರೀತಿಸುತ್ತಿದ್ದ ದರ್ಶನ್ ಈ ಬಗ್ಗೆ ಅವಿನ್ ಡಿಸೋಜಗೆ ಹಲವು ಬಾರಿ ಎಚ್ಚರಿಸಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ. ಇದೀಗ ಅದರಿಂದ ಸಿಟ್ಟಾದ ಅವಿನ್ ಡಿಸೋಜ ಏಕಾಏಕಿ ಕಾಲೇಜಿನಿಂದ ಹೊರಗೆ ಕರೆಸಿಕೊಂಡು ದರ್ಶನ್‍ಗೆ ಚಾಕು ಇರಿದಿದ್ದಾನೆ. ಘಟನೆಯಲ್ಲಿ ದರ್ಶನ್ ಹೊಟ್ಟೆಗೆ 2ಬಾರಿ, ಕತ್ತಿಗೆ ಸಮೀಪದಲ್ಲಿ ಚಾಕು ಇರಿತದಿಂದ ಗಾಯವಾಗಿದೆ. ಇದರಿಂದ ಗಂಭೀರ ಗಾಯಗೊಂಡಿರುವ ದರ್ಶನ್‍ನನ್ನು ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಈಗ ಪರಿಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ನಂತರವಷ್ಟೆ ಮುಂದಿನ ಸ್ಥಿತಿಯನ್ನು ಹೇಳಬಹುದು ಎಂದು ವೈದ್ಯರು ತಿಳಿಸಿದ್ದಾರೆ.

thirtalli-2ಚಾಕು ಇರಿತದಿಂದ ಗಲಿಬಿಲಿಗೊಂಡ ಜೂನಿಯರ್ ಕಾಲೇಜಿನ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಆಸ್ಪತ್ರೆ ಮುಂದೆ ಜಮಾಯಿಸಿದ್ದು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಪೋಲಿಸರು ಕೂಡ ಭದ್ರತೆ ಒದಗಿಸಿದ್ದರು. ತೀರ್ಥಹಳ್ಳಿ ಸಬ್ ಇನ್ಸ್‍ಪೆಕ್ಟರ್ ಸುರೇಶ್‍ರವರು ನಮ್ಮೂರ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ ತೀರ್ಥಹಳ್ಳಿಯಲ್ಲಿ ಇತ್ತೀಚಿಗೆ ಹೆಚ್ಚಿನ ಇಂತಹ ಘಟನೆಗಳು ನಡೆಯುತ್ತಿದೆ, ಆರೋಪಿ ಪತ್ತೆಗೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English