ಅಗ್ರಹಾರ ನಾಗಪಾತ್ರಿ ಯಿಂದ ಮತ್ತೊಂದು ನಾಗ ವಿಗ್ರಹ ಪತ್ತೆ

3:17 PM, Saturday, November 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

nagaraj-bhatತೀರ್ಥಹಳ್ಳಿ: ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ತೀರ್ಥಹಳ್ಳಿ ತಾಲೂಕಿನ ಆರಗ ಅಗ್ರಹಾರ ನಾಗಪಾತ್ರಿಯಾಗಿರುವ ನಾಗರಾಜ್ ಅವರು ಮಾಧ್ಯಮಗಳ ಮುಂದೆಯೇ  ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಗ್ರಾಮಪಂಚಾಯ್ತಿಯ ಮರಗಳಲೆ ಗ್ರಾಮದ ವೆಂಕಟಪ್ಪ ಪೂಜಾರಿಯವರ ಮಗ ನಾಗಪ್ಪ ಪೂಜಾರಿಯವರ ಮನೆಯ ಹಿಂಭಾಗದ ನಾಗರ ಬನದಲ್ಲಿ ನಾಗಬಿಂಬ ಹೊರತೆಗೆದಿದ್ದಾರೆ.

ಪಾತ್ರಿಗಳು ಮೊದಲೇ ಹೇಳಿದಂತೆ ಸ್ಥಳದಲ್ಲಿ ತ್ರಿಶೂಲ ಮತ್ತು ನಾಗರ ಕಲ್ಲು ಸಿಕ್ಕಿದ್ದು ಜನರಲ್ಲಿ ಆಶ್ಚರ್ಯ ಉಂಟು ಮಾಡಿದೆ. ಈ ಹಿಂದೆ ಮರಗಳಲೆಯ ಸಣ್ಣ ಉದ್ಯಮಿ ನಾಗಪ್ಪ ಪೂಜಾರಿಯವರು ತಮ್ಮ ಕುಟುಂಬದ ಸಮಸ್ಯೆ ಹಾಗು ವ್ಯಾಪಾರದ ನಷ್ಟದ ಬಗ್ಗೆ ಪಾತ್ರಿಗಳಿಗೆ ತಿಳಿಸಿದ್ದರು ಮನೆಯ ಹಿಂಭಾಗದಲ್ಲಿ ನಾಗ ದೋಷ ಇರುವುದಾಗಿ ತಿಳಿಸಿದ್ದರು.

nagaraj-bhat-3ಶುಕ್ರವಾರ ಆ ನಾಗಬಿಂಬ ಹೊರತೆಗೆಯುವ  ಕೆಲಸ ನಡೆಯಿತು.

ಈ ದೃಶ್ಯವನ್ನು ಸೆರೆಹಿಡಿಯಲು ರಾಜ್ಯದ ಪ್ರತಿಷ್ಠಿತ ಮಾಧ್ಯಮಗಳು ಸ್ಥಳಕ್ಕೆ ಆಗಮಿಸಿದ್ದಾರೆ .

ಪೆರ್ಡೂರು, ಹೆಬ್ರಿಯ ಮುದ್ರಾಡಿ ಮೊದಲಾದೆಡೆ ಈ ರೀತಿ ವಿಗ್ರಹಗಳನ್ನು ಹೊರ ತೆಗೆದು ನಾಗರಾಜ ಭಟ್ಟರು ಪ್ರಸಿದ್ದಿ ಪಡೆದಿದ್ದರು.

ನಾಗಪಾತ್ರಿ ನಾಗರಾಜ ಭಟ್ ಅವರ ಪ್ರಕಾರ ಅಘೋರಿ ಶಕ್ತಿಯಿಂದ ನಾಗನ ಬಿಂಬ ಗೋಚರವಾಗುತ್ತದೆ ಎಂದು ಹೇಳುತ್ತಾರೆ.

nagaraj-bhat-2

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English