ಬೆಂಗಳೂರು: ಪೊಲೀಸ್ ಪೇದೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹಿಂದೆ ಬೃಹತ್ ಜಾಲವೇ ಅಡಗಿದೆ ಎಂಬ ಅನುಮಾನ ಸಿಸಿಬಿ ಪೊಲೀಸರನ್ನು ಕಾಡುತ್ತಿದೆ. ಪ್ರಕರಣದ ಕಿಂಗ್ಪಿನ್ ಶಿವಕುಮಾರ್ ಹಿಂದೆ ಪೊಲೀಸ್ ಇಲಾಖೆಯ ಅಧಿಕಾರಿಗಳೇ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗ್ತಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಎಲ್ಲಿಂದ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಇರುವಂತಹ ಆ ಕಾಣದ ಕೈ ಯಾರದ್ದು ಎಂದು ಪ್ರಶ್ನೆ ಮೂಡಿದೆ. ಆರೋಪಿಗೆ ಬಲವಾದ ಲಿಂಕ್ ಇರುವುದರಿಂದಲೇ ಈ ಕೃತ್ಯ ಎಸಗಿರುವುದು ಗಮನಕ್ಕೆ ಬಂದಿದೆ ಎನ್ನಲಾಗ್ತಿದೆ. ಶಿವಕುಮಾರ್ ಪ್ರಶ್ನೆ ಪತ್ರಿಕೆ ಲೀಕ್ ಮಾಡ್ತಿರೊದು ಇದೇ ಮೊದಲಲ್ಲ. 2007ರಲ್ಲಿಯು ಇವನ ಮೇಲೆ ಕೆಸ್ ದಾಖಲಾಗಿತ್ತು.
ಪ್ರಶ್ನೆ ಪತ್ರಿಕೆ ಲೀಕ್ ಗೆ ಸಹಾಯ ಮಾಡಿದ್ದೇ ಸಿಐಡಿ ಇನ್ ಸ್ಪೆಕ್ಟರ್ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ಒಂದು ದಶಕದಿಂದ ಸಿಐಡಿಯಲ್ಲಿ ಕೆಲಸ ಮಾಡುತ್ತಿರುವ ಇನ್ಸ್ಪೆಕ್ಟರ್ವೋರ್ವ, ಸದ್ಯದಲ್ಲೆ ಡಿವೈಎಸ್ಪಿ ಪ್ರಮೋಷನ್ ಕೂಡಾ ಬರುವ ಹಂತದಲ್ಲಿದ್ದರು. ಇಷ್ಟು ದಿನ ಪ್ರಶ್ನೆಗಳನ್ನು ಕೈಯಲ್ಲಿ ಬರೆದುಕೊಂಡು ಬಂದು ಹಂಚಿಕೆ ಮಾಡುತ್ತಿದ್ದರೆನ್ನಲಾದ ಆರೋಪಿ, ಈ ಬಾರಿ ಜೆರಾಕ್ಸ್ ಮಾಡುವ ಮೂಲಕ ಲೀಕ್ ಮಾಡಿದ್ದಾರೆ.
ಪೊಲೀಸ್ ಇಲಾಖೆಯ ಒಳಗಿನ ಬೆಂಬಲ ಇಲ್ಲದಿದ್ದರೆ ಈ ಕೆಲಸ ಅಸಾಧ್ಯ ಎಂಬುದನ್ನು ಸಿಐಡಿ ಪೊಲೀಸರು ಅರಿತು ತನಿಖೆ ಚುರುಕುಗೊಳಿಸಿದ್ದಾರೆ.
Click this button or press Ctrl+G to toggle between Kannada and English