ಕುರಾನ್ ಯಾವತ್ತಿಗೂ ಧರ್ಮ ಬೋಧನೆ ಮಾಡುತ್ತದೆ ಹೊರತು, ಅಧರ್ಮವನ್ನಲ್ಲ: ಸ್ವಾಮಿ ಲಕ್ಷ್ಮೀ ಶಂಕರಾಚಾರ್ಯ

10:46 AM, Thursday, November 29th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

shankaracharyaಮಂಗಳೂರು: ಪ್ರವಾದಿ ಮಹಮ್ಮದರು ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕರು ದೊಡ್ಡ ದೊಡ್ಡ ಕಟ್ಟಡ ಕಟ್ಟುವುದರಿಂದ, ನಗರಗಳನ್ನು ನಿರ್ಮಿಸುವುದರಿಂದ ಸಮಾಜ ಸುಧಾರಣೆ ಆಗುವುದಿಲ್ಲ ಎಂದು ಇಸ್ಲಾಮಿ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಮುಲ್ಲಾ ಹೇಳಿದ್ದಾರೆ.

ನಮ್ಮೊಳಗಿರುವ ರಾಕ್ಷಸತ್ವ, ಸೈತಾನತ್ವವನ್ನು ತೊಲಗಿಸಿ ನಮ್ಮನ್ನು ನಾವು ಪರಿವರ್ತನೆ ಮಾಡಿಕೊಂಡರೆ ಖಂಡಿತಾ ಸಮಾಜ ಸುಧಾರಣೆಯಾಗುತ್ತದೆ ಎಂದರು.

shankaracharya-2ಸೀರತ್ ಅಭಿಯಾನ ಸ್ವಾಗತ ಸಮಿತಿಯ ವತಿಯಿಂದ ಪ್ರವಾದಿ ಮುಹಮ್ಮದರ ಶಿಕ್ಷಣದ ಬೆಳಕಿನಲ್ಲಿ ಎಂಬ ರಾಜ್ಯವ್ಯಾಪಿ ನಡೆಯುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇಕ್ಬಾಲ್ ಮುಲ್ಲಾ, ಪ್ರವಾದಿ ಮುಹಮ್ಮದರ ಶಿಕ್ಷಣ ವ್ಯವಸ್ಥೆ ಪ್ರಪಂಚದಲ್ಲೇ ಅತ್ಯುನ್ನತ ಮಟ್ಟದ್ದು. ಅದರಿಂದ ವ್ಯಕ್ತಿಯ ಸುಧಾರಣೆ ಪರಿವಾರದ ಸುಧಾರಣೆ ಸಮಾಜದ ಸುಧಾರಣೆ ಆಗಿದೆ ಎಂದು ಅವರು ಹೇಳಿದರು.

ಉತ್ತರ ಪ್ರದೇಶದ ಕಾನ್ಪುರದ ಸ್ವಾಮಿ ಲಕ್ಷ್ಮೀ ಶಂಕರಾಚಾರ್ಯ ಮಾತನಾಡಿ, ಅಲ್ಲಾ ಎಂದರೆ ಸತ್ಯ, ಮುಸ್ಲಿಮರು ಆತಂಕವಾದಿಗಳಲ್ಲ, ಕುರಾನ್ ಯಾವತ್ತಿಗೂ ಧರ್ಮ ಬೋಧನೆ ಮಾಡುತ್ತದೆ ಹೊರತು, ಅಧರ್ಮವನ್ನಲ್ಲ ಎಂದರು.

ಕಾಮ, ಕ್ರೋಧ, ಲೋಭ, ಮೋಹ, ಮಾತ್ಸರ್ಯವನ್ನು ನಮ್ಮ ಜೀವನದಿಂದ ಹೇಗೆ ತೊಲಗಿಸಬಹುದೆಂದು ಕುರಾನ್ ವಾಕ್ಯಗಳನ್ನು ಉದಾಹರಣೆಯಾಗಿ ವಿವರಿಸುತ್ತಾ ಮನದಟ್ಟಾಗುವಂತೆ ಸ್ವಾಮಿ ಲಕ್ಷ್ಮೀ ಶಂಕರಾಚಾರ್ಯರು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಜಾವಾಣಿ ಪತ್ರಿಕೆಯ ಸಹ ಸಂಪಾದಕ ಬಿ.ಎಂ.ಹನೀಫ್, ಕನ್ನಡದ ಖ್ಯಾತ ಕಾದಂಬರಿಕಾರ ಕುಂ.ವೀರಭದ್ರಪ್ಪ, ಮಂಗಳೂರು ವಿವಿಯ ಪ್ರಾಧ್ಯಾಪಕ ಪ್ರೊ.ಬಿ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

shankaracharya-3

shankaracharya-4

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English