ಬೆಂಗಳೂರು: ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳಲ್ಲಿ ಮೊದಲನೇ ಆದ್ಯತೆ ಕೊಡಬೇಕು. ಪರಭಾಷೆ ಚಿತ್ರಗಳನ್ನ ತಿರಸ್ಕರಿಸಬೇಕು. ಪರಭಾಷೆ ಚಿತ್ರಗಳು ಕರ್ನಾಟಕದಲ್ಲಿ ಕೊಳ್ಳೆ ಹೊಡೆಯುತ್ತಿದ್ದು, ಕನ್ನಡ ಚಿತ್ರಗಳು ಮೂಲೆ ಗುಂಪಾಗಿವೆ ಅಂತ ವಾಟಾಳ್ ನಾಗರಾಜ್ ಆಕ್ರೋಶ ಹೊರ ಹಾಕಿದರು.
ಪರಭಾಷಾ ಚಿತ್ರಗಳ ನೀತಿಯನ್ನು ವಿರೋಧಿಸಿ ಇಂದು ವಾಟಾಳ್ ನಾಗರಾಜ್ ಲಾಲ್ಬಾಗ್ ಹತ್ತಿರವಿರುವ ಊರ್ವಶಿ ಚಿತ್ರಮಂದಿರ ಮುಂದೆ ರಜನಿಕಾಂತ್ ನಟಿಸಿರುವ ತಮಿಳು ಚಿತ್ರ 2.0 ಪರಭಾಷಾ ಚಿತ್ರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತಾನಾಡಿದ ವಾಟಳ್ ನಾಗರಾಜ್, ಕನ್ನಡ ಚಿತ್ರಗಳಿಗೆ ಮಾನ್ಯತೆ ಇಲ್ಲ. ನಮಗೆ ಪರಭಾಷಾ ಚಿತ್ರ ಬೇಡ. ಕನ್ನಡ ಚಿತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಡಿಸೆಂಬರ್ 1ರಂದು ಕನ್ನಡ ಸಿನಿಮಾ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ನಡೆಸಲಾಗುವುದು.
ಕರ್ನಾಟಕ ವಾಣಿಜ್ಯ ಮಂಡಳಿ ಕನ್ನಡ ಚಿತ್ರ ಹಾಕಿಲ್ಲ. ಹೀಗಾಗಿ ಮಂಡಳಿ ವಿರುದ್ಧ ತೀವ್ರ ಹೋರಾಟಕ್ಕೆ ಸಜ್ಜಾಗುತ್ತೇವೆ. ಒಂದು ವಾರದೊಳಗೆ ರಜನಿ ಚಿತ್ರ ತಗೆಯಬೇಕು. ಇಲ್ಲವಾದರೆ ತೀವ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
Click this button or press Ctrl+G to toggle between Kannada and English