ಬಾಡಿಗೆ ವಿಚಾರಕ್ಕೆ ಮನೆ ಮಾಲೀಕನನ್ನೇ ಕೊಂದ ಆರೋಪ.. ನಾಲ್ವರು ಆರೋಪಿಗಳು ವಶಕ್ಕೆ!

1:23 PM, Friday, November 30th, 2018
Share
1 Star2 Stars3 Stars4 Stars5 Stars
(No Ratings Yet)
Loading...

murderಬೆಂಗಳೂರು: ಮನೆ ಬಾಡಿಗೆ ವಿಚಾರಕ್ಕೆ ಕೊಲೆ ನಡೆದಿರುವ ಘಟನೆ ಕೆಂಗೇರಿ ದೀಪಾಂಜಲಿ ನಗರ ಬಳಿ ನಡೆದಿದೆ.

ಮನೆ ಮಾಲೀಕ ರಮೇಶ್ ಜೈನ್ ಮೃತ ವ್ಯಕ್ತಿಯಾಗಿದ್ದಾರೆ. ಇಸ್ಲಾಮ್ ಪಾಶ ಎಂಬ ವ್ಯಕ್ತಿ ಮನೆ ಬಾಡಿಗೆ ಪಡೆದಿದ್ದ. ಆದ್ರೆ ಮನೆ ಬಾಡಿಗೆ ಹಣ ಕೊಡದೇ ಮಾಲೀಕ ರಮೇಶ್ ಜೈನ್ರನ್ನ ಸತಾಯಿಸುತ್ತಿದ್ದರು. ಇದೇ ವಿಚಾರಕ್ಕೆ ನಿನ್ನೆ ಕೊಲೆ ಮಾಡಿ ಅವರ ಶವವನ್ನು ಕೆಂಗೇರಿ ಬಳಿಯ‌ ರೈಲ್ವೆ ಪ್ಯಾರಲಲ್ ರೋಡ್ ಬಳಿ ಬಿಸಾಕಿ ಹೋಗಿದ್ದ.

ಕೊಲೆಯಾಗಿರುವ ರಮೇಶ್ ಜೈನ್ ಪ್ಲಾಸ್ಟಿಕ್ ಚೇರ್ ಬ್ಯುಸಿನೆಸ್ ಮಾಡಿಕೊಂಡು ಹಲವಾರು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ರು.

ಘಟನೆ ಸಂಬಂಧ ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದು, ಅದ್ರಲ್ಲಿ ಮೂರು ಜನ ಹೆಂಗಸರು ಇದ್ದಾರೆ. ಸದ್ಯ ಮರಣೊತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English