ಕದ್ದ ಮಾಲನ್ನು ಮೋರಿಯಲ್ಲಿಟ್ಟು ಮಾರಾಟ ಮಾಡ್ತಿದ್ದ ಮೋರಿ ಕಾಂತ ಅರೆಸ್ಟ್

3:54 PM, Friday, November 30th, 2018
Share
1 Star2 Stars3 Stars4 Stars5 Stars
(No Ratings Yet)
Loading...

policeಬೆಂಗಳೂರು: ಕುಖ್ಯಾತ ಮನೆಗಳ್ಳನನ್ನ ಬಂಧಿಸುವಲ್ಲಿ ಕೋರಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾಂತರಾಜ್ ಅಲಿಯಾಸ್ ಮೋರಿ ಕಾಂತ ಬಂಧಿತ ಆರೋಪಿ. ಕಳೆದ ಇಪ್ಪತ್ತು ವರ್ಷಗಳಿಂದ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ.

ಆದ್ರೆ ಇದೀಗ ಕೋರಮಂಗಲ ಪೊಲೀಸರ ಕೈಗೆ ಸಿಕ್ಕಿದ್ದು ಬಂಧಿತನಿಂದ 1.19 ಕೆ ಜಿ ಚಿನ್ನಾಭರಣ ಮತ್ತು 900 ಗ್ರಾಂ ಬೆಳ್ಳಿ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಯೂ ಚಿಕ್ಕಬಳ್ಳಾಪುರ ಮೂಲದವನ್ನಾಗಿದ್ದು, ಕಳೆದ ಇಪ್ಪತ್ತು ವರ್ಷಗಳಿಂದ ನಗರದಲ್ಲಿ ಬಂದು ವಾಸವಾಗಿದ್ದ. ನಂತ್ರ ಅಪಾರ್ಟ್ಮೆಂಟ್, ‌ಮನೆಗಳನ್ನ ಕಳ್ಳತನ ಮಾಡಿ ಜೀವನ ಸಾಗಿಸುತ್ತಿದ್ದ. ಆದ್ರೆ ಕೆಲ ದಿನಗಳ ಹಿಂದೆ ಸಾರ್ವಜನಿಕರ ಕೈಗೆ ಸಿಕ್ಕಿ ಹಾಕಿಕೊಂಡಿದ್ದ. ಅವಾಗ ಅಲ್ಲಿಂದ ಎಸ್ಕೇಪ್ ಆಗಿ ಮೋರಿಯಲ್ಲಿ ಅಡಗಿ ಕುಳಿತುಕೊಂಡು ಅಲ್ಲಿಂದ ಕದ್ದ ಮಾಲುಗಳನ್ನ ಮೋರಿಯಲ್ಲಿಟ್ಟು ನಂತ್ರ ಆ ಮಾಲುಗಳನ್ನ ಮಾರಟ ಮಾಡುತ್ತಿದ್ದ.

ಕದ್ದ ಮಾಲು ಮಾರಿ ಬಂದ ಹಣದಿಂದ ಮೋರಿ ಕಾಂತ ತಲೆ ಮಾಂಸ ತಿನ್ನುತ್ತಿದ್ದ. ಅವನಿಗೆ ತಲೆ ಮಾಂಸದ ಖಾದ್ಯಗಳೆಂದರೆ ಅಚ್ಚುಮೆಚ್ಚು. ಪಬ್ ಬಾರ್ ಹೀಗೆ ಮೋಜ್ ಮಸ್ತಿ ಮಾಡುತ್ತಿದ್ದ. ಬಂಧಿತನಿಂದ ಸುಮಾರು 12 ಪ್ರಕರಣಗಳು ಬೆಳಕಿಗೆ ಬಂದಿದ್ದು, ಬೆಂಗಳೂರಿನ ಪೀಣ್ಯ, ಬೇಗೂರು, ಪರಪ್ಪನ ಅಗ್ರಹಾರ , ಸುದ್ದಗುಂಟೆ ಪಾಳ್ಯ , ತಿಪಟೂರು ಪುರ ,ಹಳಿಮಾವು ಸೇರಿದಂತೆ ಹಲವು ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳು ಪತ್ತೆಯಾಗಿದವೆ.‌‌

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English