ಉಡುಪಿ: ಅಂಬರೀಶ್ ಅಂತ್ಯಸಂಸ್ಕಾರದಲ್ಲಿ ಭಾಗವಹಿಸದ ನಟಿ ರಮ್ಯಾ ಅವರು ಅಂಬರೀಶ್ ಅವರ ವೈಕುಂಠ ಸಮಾರಾಧನೆಗಾದರೂ ಬರಬಹುದು ಎಂದು ಸಚಿವೆ ಜಯಮಾಲಾ ಹೇಳಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಮ್ಯಾಗೆ ಹುಷಾರಿಲ್ಲ ಅಂತ ಅವರೇ ಹೇಳ್ಕೊಂಡಿದಾರಲ್ವಾ? ಹೆಣ್ಣು ಮಕ್ಕಳಿಗೆ ಸಮಸ್ಯೆಗಳು ಇರ್ತವೆ. ಬೇರೇನೂ ರಾಜಕೀಯ ಕಾರಣ ಇರ್ಲಿಕ್ಕಿಲ್ಲ. ಅಂಬರೀಶ್ ಅವರ ವೈಕುಂಠ ಸಮಾರಾಧನೆಯಂದಾದರೂ ಅವರು ಬರಬಹುದು ಎಂದು ಹೇಳಿದರು.
ವಿಷ್ಣುವರ್ಧನ್ ಸ್ಮಾರಕ ವಿವಾದದ ಕುರಿತು ಮಾತನಾಡಿದ ಅವರು, ವಿಷ್ಣುವರ್ಧನ್ ನಮ್ಮನ್ನಗಲಿ ಒಂಭತ್ತು ವರ್ಷ ಆಗಿದೆ. ಭಾರತಿ ಅವರ ಬೇಸರ ಸಹಜವಾದುದು. ಭಾರತಿ ಅವರ ಕುಟುಂಬದ ಅಭಿಪ್ರಾಯಕ್ಕೆ ನಾನು ಬೆಲೆ ಕೊಡ್ತೇನೆ. ಮೈಸೂರು ಅಂದ್ರೆ ವಿಷ್ಣುವರ್ಧನ್ಗೆ ಪ್ರಾಣ. ಹೀಗಾಗಿ ಮೈಸೂರಲ್ಲಿ ಸ್ಮಾರಕ ಆಗಲಿ ಅಂತ ಭಾರತಿ ಕೇಳ್ತಿದಾರೆ. ವಿಷ್ಣು ಆಸೆ ಏನು ಅನ್ನೋದು ಅವರ ಕುಟುಂಬಕ್ಕೆ ಗೊತ್ತಿರುತ್ತೆ. ಸಿಎಂ ಕುಮಾರಸ್ವಾಮಿಯವರು ಕೂಡಾ ಸಿನೆಮಾ ರಂಗದವರೇ ಆಗಿರುವುದರಿಂದ ಯಾವುದೇ ಭಿನ್ನಾಭಿಪ್ರಾಯ ಬರಲ್ಲ ಎಂದರು.
ಸ್ಮಾರಕ ನಿರ್ಮಿಸುವ ಭೂಮಿಗೆ ಸಂಬಂದಪಟ್ಟಂತೆ ಸಣ್ಣ ತಕರಾರು ಇದೆ ಅನಿಸುತ್ತೆ. ವಿಷ್ಣು ಸಮಾಧಿ ವಿಚಾರದಲ್ಲಿ ನಮಗೆಲ್ಲರಿಗೂ ಅಸಹಾಯಕತೆ ಇದೆ. ನಾವೆಲ್ಲರೂ ಭಾರತಿ ಅವರ ಪರ ನಿಲ್ತೀವಿ ಎಂದು ಭರವಸೆ ನೀಡಿದರು.
Click this button or press Ctrl+G to toggle between Kannada and English