ಶಿರಸಿ: ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತಕುಮಾರ್ ಚಿತಾಭಸ್ಮ ಶುಕ್ರವಾರ ಜಿಲ್ಲೆಗೆ ಆಗಮಿಸಿದ್ದು, ಶಿರಸಿಯ ಶಾಸಕರ ಕಚೇರಿಯಲ್ಲಿ ನಮನ ಸಲ್ಲಿಸಲಾಯಿತು.
ಶಿರಸಿಗೆ ಆಗಮಿಸಿದ ಚಿತಾಭಸ್ಮವನ್ನು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕಚೇರಿಯಲ್ಲಿಟ್ಟಿದ್ದು ಪಕ್ಷದ ಮುಖಂಡರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಅಸ್ಥಿಗೆ ಪುಷ್ಪನಮನ ಸಲ್ಲಿಸಿದರು. ಇಂದು ಬೆಳಿಗ್ಗೆ ಗೋಕರ್ಣದಲ್ಲಿ ವಿಸರ್ಜಿಸಲಾಗುವುದು.
ಈ ವೇಳೆ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಅನಂತಕುಮಾರ್ ಒಡನಾಟ ಮೆಲುಕು ಹಾಕುವುದರ ಜೊತೆಗೆ ಅವರ ಅವಧಿಯಲ್ಲಿ ಮಾಡಿದ ಒಳ್ಳೆಯ ಕಾರ್ಯಗಳನ್ನು ಸ್ಮರಿಸಿದರು. ದೇಶದ ಪವಿತ್ರ ನದಿಗಳಲ್ಲಿ ಅನಂತ್ ಅಸ್ತಿ ವಿಸರ್ಜಿಸಲಾಗುತ್ತಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಶನಿವಾರ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅನಂತಕುಮಾರ್ ಅಸ್ಥಿ ವಿಸರ್ಜಿಸಲಾಗುವುದು ಎಂದರು.
Click this button or press Ctrl+G to toggle between Kannada and English