ಮುಡಿಪುವಿನಲ್ಲಿ ಮೂರು ದಿನಗಳ ಸೂರಜ್‌ ಕಲಾಸಿರಿ-2018ಕ್ಕೆ ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ

2:25 PM, Saturday, December 1st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Suraj-Kalasiriಉಳ್ಳಾಲ:  ಮುಡಿಪುವಿನ ಸೂರಜ್‌ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸೂರಜ್‌ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಮೂರು ದಿನಗಳ ಸೂರಜ್‌ ಕಲಾಸಿರಿ-2018ನ್ನು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶುಕ್ರವಾರ ಉದ್ಘಾಟಿಸಿದರು .

ಸೂರಜ್‌ ಶಿಕ್ಷಣ ಸಂಸ್ಥೆ ಸೂರಜ್‌ ಕಲಾಸಿರಿಯ ಮೂಲಕ ಮಕ್ಕಳ ಸಾಧನೆಯನ್ನು  ಹೊರತರುವ ಕಾರ್ಯ ಮಾಡುತ್ತಿರುವುದು  ಶ್ಲಾಘನೀಯ ಎಂದು ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಅವರು  ವಿವಿಧ ಕ್ಷೇತ್ರದ ಸಾಧಕರಿಗೆ ಸೂರಜ್‌ ಸೇವಾ ಪ್ರಶಸ್ತಿ ಪ್ರದಾನಗೈದು ಅವರು ಮಾತನಾಡಿದರು.

ಯವಜನತೆ ಪಾಶ್ಚಾತ್ಯ ಸಂಸ್ಕೃತಿಯತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇನ್ಫೋಸಿಸ್‌ ಸೇರಿದಂತೆ ಹಲವಾರು ಸಾಧಕರಿಂದಾಗಿ ಪ್ರಪಂಚದಲ್ಲಿ ಭಾರತ ತನ್ನದೇ ಆದ ಸಾಧನೆಯನ್ನು ನಡೆಸುವ ಮೂಲಕ ಇತರರಿಗೆ ಸರಿಸಮಾನರಾಗಿ ತಲೆ ಎತ್ತಿ ನಿಲ್ಲುವ ಕೆಲಸ ಆಗಿದೆ. ಭಾರತೀಯತೆಯನ್ನು ಎತ್ತಿ ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯಬೇಕು. ಬದುಕಿಗಾಗಿ ವಿದ್ಯೆ ಇರಬೇಕು. ಶಿಕ್ಷಿತರಾದ ಮಾತ್ರಕ್ಕೆ ವೈದ್ಯ, ಎಂಜಿನಿಯರ್‌ ಕ್ಷೇತ್ರವನ್ನೇ ಆರಿಸುವುದಲ್ಲ. ಕೃಷಿಯ ಜತೆಗೂ ಬದುಕನ್ನು ರೂಪಿಸುವ ಕಾರ್ಯ ನಡೆಯಬೇಕು. ಉನ್ನತ ಶಿಕ್ಷಣ ಪಡೆದವರು ಕೃಷಿ ಕ್ಷೇತ್ರದಲ್ಲಿ ದುಡಿಯುವ ಮೂಲಕ ಪ್ರೇರಣೆಯಾಗಬೇಕು ಎಂದರು.

Suraj-Kalasiriಕರ್ಣಾಟಕ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಎಂ.ಎಸ್‌. ಮಹಾಬಲೇಶ್ವರ ಭಟ್‌, ಶ್ರೀ ಕ್ಷೇತ್ರ ಕಟೀಲಿನ ವಾಸುದೇವ ಆಸ್ರಣ್ಣ ಹಾಗೂ ಡಾ| ಅಣ್ಣಯ್ಯ ಕುಲಾಲ್‌ ಅವರಿಗೆ ಸೂರಜ್‌ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು. ಸೂರಜ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮಂಜುನಾಥ ಎಸ್‌. ರೇವಣಕರ್  ಹಾಗೂ ಹೇಮಲತಾ ಎಂ. ರೇವಣಕರ್ ರೋಟರಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಹಿಂದೆ ಪ್ರದಾನಿಸಲಾದ ರೋಟೇರಿಯನ್‌ ಪಿಎಚ್‌ಎಫ್‌ನ್ನು ಹೆಗ್ಗಡೆ ಅವರು ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು.

ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಸಚಿವ ಯು.ಟಿ. ಖಾದರ್‌, ಮುಡಿಪು ಸಂತ ಜೋಸೆಫ್‌ ವಾಜ್‌ನ ಧರ್ಮಗುರು ಬೆಂಜಮಿನ್‌ ಪಿಂಟೊ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಇನ್ಫೋಸಿಸ್‌ನ ಎಚ್‌ಆರ್‌ ಅಧಿಕಾರಿ ವಾಸುದೇವ ಕಾಮತ್‌, ಶಿಕ್ಷಣ ಸಂಸ್ಥೆಯ ಹೇಮಲತಾ ಎಂ. ರೇವಣಕರ್ , ಸೂರಜ್‌ ಎಂ. ರೇವಣಕರ್  ಹಾಗೂ ಸುಧಾಕರ ರಾವ್‌ ಪೇಜಾವರ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲು ಆಕರ್ಷಕ ಮೆರವಣಿಗೆ ನಡೆಯಿತು.

ಸಂಸ್ಥೆಯ ಅಧ್ಯಕ್ಷ ಡಾ| ಮಂಜುನಾಥ ಎಸ್‌. ರೇವಣಕರ್  ಸ್ವಾಗತಿಸಿದರು. ನಿತೀಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸೂರಜ್‌ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ವಿಮಲಾ ಶೆಟ್ಟಿ ವಂದಿಸಿದರು.

Suraj Kalasiri

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English