ಬೆಂಗಳೂರಿನಲ್ಲಿ ಲಾರಿ ಚಾಲಕನ ಬರ್ಬರ ಹತ್ಯೆ

2:53 PM, Saturday, December 1st, 2018
Share
1 Star2 Stars3 Stars4 Stars5 Stars
(No Ratings Yet)
Loading...

bengaloreಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಚ್ಚು ಲಾಂಗ್ಗಳು ಸದ್ದು ಮಾಡಿದೆ. ವ್ಯಕ್ತಿವೋರ್ವನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹೆಣ್ಣೂರು ಬಂಡೆಯಲ್ಲಿ ನಡೆದಿದೆ.

ಕೇಶವ್ (30) ಹತ್ಯೆಗೊಳಗಾದ ವ್ಯಕ್ತಿ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಹೆಣ್ಣೂರು ಬಂಡೆ ಮುಖ್ಯ ರಸ್ತೆಯ ಬಳಿ ಕೇಶವ್ ಲಾರಿಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕುಡಿದು ಬಂದ ದುಷ್ಕರ್ಮಿಗಳು ಲಾರಿಗೆ ಅಡ್ಡ ಗಟ್ಟಿ ಮಚ್ಚು, ಲಾಂಗ್ಗಳಿಂದ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಹೆಣ್ಣೂರು ಪೊಲೀಸರು ಹಾಗೂ ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಭೇಟಿ ನೀಡಿದ್ದು, ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ . ಇನ್ನು ಕೊಲೆಗೆ ಯಾವುದೇ ನಿಖರ ಕಾರಣ ತಿಳಿಯದ ಕಾರಣ ತನಿಖೆ ಚುರುಕುಗೊಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English