ಬೆಂಗಳೂರು: ದಕ್ಷಿಣ ರಾಜ್ಯಗಳ ಬಿಜೆಪಿ ಶಾಸಕರು, ಸಂಸತ್ ಸದಸ್ಯರುಗಳ ಆಪ್ತ ಸಹಾಯಕರುಗಳ ಪ್ರಶಿಕ್ಷಣ ಶಿಬಿರವನ್ನು ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಇಂದು ಬೆಂಗಳೂರಿನಲ್ಲಿ ಉದ್ಘಾಟಿಸಿದರು.
ಬಿಜೆಪಿ ಕೇಂದ್ರೀಯ ಪ್ರಶಿಕ್ಷಣ ಪ್ರಕೋಷ್ಠದ ಸದಸ್ಯರಾದ ರವೀಂದ್ರ ಸಾಠೆ, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಜಗದೀಶ್ ಹಿರೇಮನಿ, ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯೆ ಮಧುಶ್ರೀ ಈ ಸಂದರ್ಭದಲ್ಲಿ ಹಾಜರಿದ್ದರು.
ಸಭೆಯಲ್ಲಿ ಹಿರಿಯ ಬಿಜೆಪಿ ನಾಯಕರಾದ ರಾಮಚಂದ್ರ ಗೌಡ ಮಾತನಾಡಿ, ದಕ್ಷಿಣ ರಾಜ್ಯದಲ್ಲಿ ಬಿಜೆಪಿ ಬಲ ಹೆಚ್ಚಾಗುತ್ತಿದೆ. ಕೇರಳದಂತಹ ರಾಜ್ಯದಲ್ಲಿ ನಾವು ಖಾತೆ ತೆರೆದಿದ್ದೇವೆ. ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ನಮ್ಮ ನೆಲೆ ಭದ್ರವಾಗುತ್ತಿದೆ. ತಮಿಳುನಾಡು ಕೂಡ ನಿರೀಕ್ಷೆ ಮೂಡಿಸುತ್ತಿದೆ. ಮುಂಬರುವ ಲೋಕಸಭೆ ಚುನಾವಣೆ ನಮಗೆ ಅತ್ಯಂತ ಮಹತ್ವದ್ದಾಗಿದೆ. ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ದಕ್ಷಿಣ ರಾಜ್ಯಗಳಿಂದ ಹೆಚ್ಚು ಸಂಸದರನ್ನು ಆಯ್ಕೆ ಮಾಡಿ ಕಳಿಸಿಕೊಡುವ ಅನಿವಾರ್ಯತೆ ಇದೆ. ಅದನ್ನು ಮನಗಂಡು ನಾವು ಕಾರ್ಯನಿರ್ವಹಿಸಬೇಕೆಂದರು.
Click this button or press Ctrl+G to toggle between Kannada and English