ಮಂಗಳೂರು: ಮನಪಾ ನಗರ ಬಡತನ ನಿರ್ಮೂಲನಾ ಕೋಶದ ಆಶ್ರಯದಲ್ಲಿ ವಿಶೇಷಚೇತನರ ದಿನಾಚರಣೆ ಹಾಗೂ ಸರ್ಕಾರಿ ಸವಲತ್ತುಗಳ ವಿತರಣಾ ಕಾರ್ಯಕ್ರಮವೂ ಮಹಾನಗರ ಪಾಲಿಕೆಯಲ್ಲಿ ನಡೆಯಿತು.
ಈ ವೇಳೆ ಓರ್ವ ವಿಶೇಷಚೇತನರಿಗೆ ಕೃತಕ ಕಾಲುಗಳ ವ್ಯವಸ್ಥೆ, ಇಬ್ಬರಿಗೆ ಶ್ರವಣ ಸಾಧನ ಹಾಗೂ ನಾಲ್ಕು ಮಂದಿಗೆ ಚಿಕಿತ್ಸಾ ವೆಚ್ಚಕ್ಕೆ ಚೆಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಮನಪಾ ಮೇಯರ್ ಭಾಸ್ಕರ್ ಕೆ. ವಿಶೇಷಚೇತನರಿಗೆ ಮಾನವೀಯತೆಯ ನೆಲೆಯಲ್ಲಿ, ಅವರು ಸ್ವಾವಲಂಬಿಗಳಾಗಿ ಜೀವನ ನಡೆಸುವಂತಹ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಎಲ್ಲರಿಗೂ ಈ ಸವಲತ್ತುಗಳು ದೊರಕುವಂತಾಗಬೇಕು ಎಂದರು.
ಈ ಸಂದರ್ಭ ಮಂಗಳೂರು ಮನಪಾ ಆಯುಕ್ತ ಮೊಹಮ್ಮದ್ ನಜೀರ್, ಉಪ ಮೇಯರ್ ಮುಹಮ್ಮದ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಸಬಿತಾ ಮಿಸ್ತಿಕ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English