ತಂಗಿಯನ್ನ ಚುಡಾಯಿಸಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಕೊಲೆ ಪ್ರಕರಣ: ಆರೋಪಿಗಳ ಬಂಧನ

1:57 PM, Wednesday, December 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

arrestedಬೆಂಗಳೂರು: ತಂಗಿಯನ್ನ ಚುಡಾಯಿಸಿದ್ದನ್ನು ಪ್ರಶ್ನಿಸಿದ್ದ ಆಕೆಯ ಅಣ್ಣನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಮುರುಗೇಶ್, ಹರೀಶ, ಲೂರ್ದು ಲೀನಸ್, ಶಶಿಕಲಾ, ವಿಜಯಕುಮಾರ್ ಹಾಗೂ ಸಚಿನ್ ಬಂಧಿತ ಆರೋಪಿಗಳು.

ತಂಗಿಯನ್ನ ಚುಡಾಯಿಸಿದ್ದಕ್ಕೆ ಆಕೆಯ ಅಣ್ಣ ಮಂಜುನಾಥ ಅಲಿಯಾಸ್ ರೋಮಿಯೋ, ಆರೋಪಿ ಮುರಗೇಶ್ ಜೊತೆ ಗಲಾಟೆ ಮಾಡಿದ್ದ. ಇದೇ ಕಾರಣಕ್ಕೆ ಕಳೆದ 22ನೇ ತಾರೀಖಿನಂದು ಮೈಸೂರು ರಸ್ತೆಯ ಪಂತರಪಾಳ್ಯ ಅಬೇಂಡ್ಕರ್ ನಗರ ಸ್ಲಂ ಕ್ವಾಟ್ರಸ್ನಲ್ಲಿ ಮಂಜುನಾಥ್ ಮಾವನ ಮನೆಯಲ್ಲಿ ಮಲಗಿದ್ದ.

ಈ ವೇಳೆ, ಅದೇ ಏರಿಯಾದ ನಿವಾಸಿ ಮುರುಗೇಶ್ ಹಾಗೂ ಈತನ ಮೊದಲ ಹೆಂಡತಿ ಶಶಿಕಲಾ ಹಾಗೂ ಸಹಚರರು ಜೊತೆ ಸೇರಿ ಮಚ್ಚುಗಳಿಂದ ಕುತ್ತಿಗೆ, ಎಡಗೈಗೆ ಬರ್ಬರವಾಗಿ ಹೊಡೆದು ಪರಾರಿಯಾಗಿದ್ದರು. ಇದೀಗ ಪೊಲೀಸರು ಕೊಲೆಯ ಅಸಲಿ ಕಹಾನಿ ಪತ್ತೆ ಹಚ್ಚಿ ಆರೋಪಿಗಳನ್ನ ಬಂಧಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English