ಸಿಸಿಬಿಯಿಂದ ಕುಖ್ಯಾತ ರೌಡಿ ಮಿರ್ಲೆ ವರದರಾಜ್​ ಅರೆಸ್ಟ್

4:49 PM, Thursday, December 6th, 2018
Share
1 Star2 Stars3 Stars4 Stars5 Stars
(No Ratings Yet)
Loading...

bengaluruಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಮಿರ್ಲೆ ವರದರಾಜ್ಗೆ ಸಿಸಿಬಿ ಪೊಲೀಸರು ಶಾಕ್ ನೀಡಿದ್ದಾರೆ. ಮಿರ್ಲೆ ವರದರಾಜ್ಗೆ ಸೇರಿದ ಕೆಂಗೇರಿ ಸ್ಯಾಟಲೇಟ್ ಟೌನ್ ಬಳಿಯಿರುವ ಮನೆ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.

ಈತ ಭೂ ಹಗರಣ, ಹಫ್ತಾ ವಸೂಲಿ ಸೇರಿದಂತೆ ಹಲವು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು, ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಆತನ ಸಹಚರರಾದ ಲಕ್ಷ್ಮಣ ಹಾಗೂ ಡಿಪೋ ನಾಗರಾಜ್ ಮನೆ ಮೇಲೂ ದಾಳಿ ಮಾಡಿ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ.

ವರದರಾಜ್ ವಿರುದ್ಧ ಸಿಸಿಬಿಯಲ್ಲಿ ಆನೇಕರು ದೂರು ನೀಡಿದ್ದರು. ಇದರನ್ವಯ ಸಿಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಸದ್ಯ ಮಿರ್ಲೆ ವರದರಾಜ್ನ ಸಹಚರರಾದ ಲಕ್ಷ್ಮಣ ಹಾಗೂ ನಾಗರಾಜ್ನನ್ನು ಬಂಧಿಸಲು ಸಿಸಿಬಿ ಬಲೆ ಹೆಣೆದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English