ಶಿವಕುಮಾರ ಶ್ರೀಗಳ‌ ಆರೋಗ್ಯ ಸ್ಥಿರವಾಗಿದೆ, ಆತಂಕ ಬೇಡ: ಹೆಚ್​.ಡಿ. ಕುಮಾರಸ್ವಾಮಿ

10:21 AM, Friday, December 7th, 2018
Share
1 Star2 Stars3 Stars4 Stars5 Stars
(No Ratings Yet)
Loading...

kumarswamyಚಿಕ್ಕಮಗಳೂರು: ಶೃಂಗೇರಿ ಶಾರದಾಂಬೆ ದರ್ಶನ ಪಡೆದ ಸಿಎಂ ಹೆಚ್ಡಿಕೆ, ಶ್ರೀಗಳ‌ ಆರೋಗ್ಯದ ಬಗ್ಗೆ ಜನರಿಗೆ‌ ಆತಂಕ ಬೇಡ. ಅವರ ಆರೋಗ್ಯದಲ್ಲಿ ಸಣ್ಣ ಮಟ್ಟದ ಏರುಪೇರುಗಳಿವೆ. ಅವರ‌ ಆರೋಗ್ಯ ಸಂಬಂಧ ಪಿನ್ ಟು ಪಿನ್ ಮಾಹಿತಿ ತರಿಸಿಕೊಳ್ತಿದ್ದೇನೆ ಎಂದಿದ್ದಾರೆ.

ಸಚಿವ ಹೆಚ್.ಡಿ.ರೇವಣ್ಣ ಜೊತೆ ಶಾರದಾಂಬೆ ದರ್ಶನ ಪಡೆದ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಠದ ಕಿರಿಯ ಸ್ವಾಮೀಜಿ‌ ಜೊತೆ‌ ನಿರಂತರ‌‌ ಸಂಪರ್ಕದಲ್ಲಿದ್ದೇನೆ. ಹೆಚ್ಚಿನ ಚಿಕಿತ್ಸೆಗೆ ಚೆನ್ನೈ ಆಸ್ಪತ್ರೆ‌ಗೆ ಕರೆದುಕೊಂಡು ಹೋಗಲು ತೀರ್ಮಾನ ಮಾಡಲಾಗಿದೆ. ನಾನು ನಿನ್ನೆಯೇ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ. ಹಲವಾರು ವೈದ್ಯರು ಹಾಗೂ ತಜ್ಞರ ತಂಡದಿಂದ ಸ್ವಾಮೀಜಿಗೆ ಚಿಕಿತ್ಸೆ ನೀಡಲಾಗಿದೆ. ಸರ್ಕಾರ ಆಸ್ಪತ್ರೆಯ ವೆಚ್ಚವನ್ನು ಭರಿಸಲಿದೆ. ರಾಜ್ಯದ‌ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸರಿಗೆ‌ ಎಲ್ಲಾ ರೀತಿಯ ಸಹಕಾರಕ್ಕೆ ಸೂಚಿಸಿದ್ದೇನೆ ಎಂದಿದ್ದಾರೆ.

ಶೃಂಗೇರಿ ಶಾರದಾಂಬೆ ಸನ್ನಿಧಾನದಲ್ಲಿ ನಡೆಯುತ್ತಿರುವ ಪ್ರತ್ಯಂಗಿರ ಹೋಮದಲ್ಲಿ ಸಿಎಂ ಹೆಚ್ಡಿಕೆ ಹಾಗೂ ಸಚಿವ ಹೆಚ್.ಡಿ.ರೇವಣ್ಣ ಭಾಗಿಯಾಗುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English