ಹೈದರಾಬಾದ್: ಅವಧಿಗೂ ಮುನ್ನ ವಿಧಾನಸಭೆ ವಿಸರ್ಜನೆ, ರಾಷ್ಟ್ರ ನಾಯಕರ ಅಬ್ಬರದ ಪ್ರಚಾರ ಇಷ್ಟೆಲ್ಲಾ ಸವಾಲುಗಳ ನಡುವೆಯೂ ಗೆದ್ದು ಬೀಗಿದ ಕೆ. ಚಂದ್ರಶೇಖರ್ ರಾವ್ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಗಾದಿಗೇರುವ ತಯಾರಿಯಲ್ಲಿದ್ದಾರೆ.
ಇಂದು ಅಧಿಕೃತವಾಗಿ ಅವರು ಶಾಸಕಾಂಗದ ಪಕ್ಷದ ನಾಯಕರಾಗಿ ಆಯ್ಕೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬೆಳಗ್ಗೆ 11:30ಕ್ಕೆ ಶಾಸಕಾಂಗ ಪಕ್ಷದ ಸಭೆ ಆರಂಭವಾಗಲಿದ್ದು, ಈ ಪ್ರಕ್ರಿಯೆ ನಡೆಯಲಿದೆ.
ಇನ್ನು ಪ್ರಮಾಣವಚನ ಸ್ವೀಕಾರದ ಕುರಿತಾಗಿ ಚರ್ಚೆ ನಡೆಸಲು ಅವರು ನಾಳೆ ಸಭೆ ನಡೆಸುವುದಾಗಿ ತಿಳಿದುಬಂದಿದೆ. ಮತ್ತೆ ಕೆಲ ಮೂಲಗಳಂತೆ ಅವರು ನಾಳೆಯೇ ಪ್ರಮಾಣವಚನ ಸ್ವೀಕರಿಸುತ್ತಾರೆ ಎನ್ನಲಾಗ್ತಿದೆ.
ಇಂದು ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿ, ತಮ್ಮ ನೇತೃತ್ವದಲ್ಲಿ ಎರಡನೇ ಬಾರಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಡಿಸೆಂಬರ್ 15ರೊಳಗಾಗಿಯೇ ರಾವ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗ್ತಿದೆ. ರಾವ್ಗೆ ಜ್ಯೋತಿಷ್ಯದ ಬಗ್ಗೆ ನಂಬಿಕೆ ಇರುವುದರಿಂದ 15ರ ನಂತರ ಒಳ್ಳೆಯ ದಿನಗಳಿಲ್ಲವೆಂದು, ಅಷ್ಟರೊಳಗೇ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧರಾಗುತ್ತಿದ್ದಾರೆ ಎನ್ನಲಾಗ್ತಿದೆ.
Click this button or press Ctrl+G to toggle between Kannada and English