ನವದೆಹಲಿ: ಈ ಬಾರಿಯ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಯಾವುದೇ ಆಟ ನಡೆಯದೆ, ಹೀನಾಯ ಸೋಲು ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ ಈ ಚುನಾವಣೆ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂಬ ಮಾತುಗಳನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ತಳ್ಳಿಹಾಕಿದ್ದಾರೆ.
2019ರ ಲೋಕಸಭೆ ಚುನಾವಣೆಗೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಯಾವುದೇ ಪ್ರಭಾವ ಬೀರದು. ಕೇಂದ್ರ ಸರ್ಕಾರದ ಕಾರ್ಯ ಆಧರಿಸಿಯೇ ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳಲಿದೆ ಎಂದು ಅವರು ಹೇಳಿದ್ದಾರೆ. ರಾಜ್ಯ ಚುನಾವಣೆಯ ವಿಚಾರಗಳೇ ಬೇರೆ. ಇದೇ ಮೂರು ರಾಜ್ಯಗಳಲ್ಲಿ 2003ರಲ್ಲಿ ನಡೆದ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಿದ್ದೆವು. 2004 ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಕಂಡಿದ್ದೆವು ಎಂದು ವಿಶ್ಲೇಷಿಸಿದ್ದಾರೆ.
2019ರ ಚುನಾವಣೆಯು ಈ ಫಲಿತಾಂಶದ ಮೇಲೆ ಆಧಾರಿತವಾಗಿಲ್ಲ. ಅದೇನಿದ್ದರೂ ಕೇಂದ್ರ ಸರ್ಕಾರದ ಕಾರ್ಯಗಳು ಹಾಗೂ ಪ್ರಧಾನಿ ಮೋದಿ ಅವರ ನಾಯಕತ್ವ ಆಧರಿಸಿ ನಿರ್ಧಾರವಾಗಲಿದೆ. ಆದರೂ ಮುಂದಿನ ಚುಣಾವಣೆಯಲ್ಲಿ ನಾವು ಸಾಕಷ್ಟು ಶ್ರಮ ವಹಿಸಬೇಕಿದೆ. ಇದು ಆತ್ಮವಿಮರ್ಶೆಯ ಸಮಯವೂ ಹೌದು ಎಂದು ಹೇಳಿದ್ದಾರೆ.
ರಾಹುಲ್ ನಾಯಕತ್ವದ ಬಗ್ಗೆ ಮಾತನಾಡಿರುವ ಜೇಟ್ಲಿ, ಒಬ್ಬರ ಮೇಲೆ ಚುನಾವಣೆ ಅವಲಂಬಿತವಾಗಿರಲ್ಲ ಎಂದು ಕುಟುಕಿದ್ದಾರೆ.
Click this button or press Ctrl+G to toggle between Kannada and English