ಕುಲಾಲ ಸಂಘ ಮುಂಬಯಿ ಚರ್ಚ್ ಗೇಟ್: ದಹಿಸರ್ ಸ್ಥಳೀಯ ಸಮಿತಿ ವಾರ್ಷಿಕ ಸ್ನೇಹ ಮಿಲನ, ಆರೋಗ್ಯ ತಪಾಸಣಾ ಶಿಭಿರ

11:09 AM, Thursday, December 13th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

mumbaiಮುಂಬಯಿ: ನಮ್ಮ ಸಮಾಜದ ಹಿರಿಯರು ಅಂದು ಉತ್ತಮ ಉದ್ದೇಶದಿಂದ ಕಷ್ಟಪಟ್ಟು ಸ್ಥಾಪಿಸಿದ ಈ ಸಂಘಟನೆ ಇಂದು ಯಶಸ್ವಿಯ ಹಾದಿಯಲ್ಲಿ ಮುಂದುವರಿತ್ತಿದ್ದು, ಇದಕ್ಕೆ ಎಲ್ಲಾ ಸ್ಥಳೀಯ ಸಮಿತಿಗಳ ಪ್ರೋತ್ಸಾಹವೂ ಪ್ರಶಂಸನೀಯ. ಸಮಾಜದ ಯುವ ಜನಾಂಗವು ಕೂಡಾ ಅಧಿಕ ಸಂಖ್ಯೆಯಲ್ಲಿ ಮುಂದೆ ಬಂದು ಎಲ್ಲರೂ ಕೈಜೋಡಿಸುದರೊಂದಿಗೆ ನಮ್ಮ ಮುಂದಿನ ಎಲ್ಲಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರೋಣ ಎಂದು ಕುಲಾಲ ಸಂಘ ಮುಂಬಯಿ ಯ ಅಧ್ಯಕ್ಷರಾದ ಪಿ. ದೇವದಾಸ್ ಎಲ್. ಕುಲಾಲ್ ನುಡಿದರು.

ಚಿಲ್ಡ್ರನ್ಸ್ ಅಕಾಡೆಮಿ, ಬಚ್ಚಾನಿ ನಗರ, ಮಲಾಡ್ ಪೂರ್ವ ಇಲ್ಲಿ ಜರಗಿದ ಕುಲಾಲ ಸಂಘ ಮುಂಬಯಿ ಚರ್ಚ್ ಗೇಟ್ – ದಹಿಸರ್ ಪ್ರಾದೇಶಿಕ ಸಮಿತಿ ಯ 6ನೇ ವಾರ್ಷಿಕ ಸ್ನೇಹ ಮಿಲನ, ಆರೋಗ್ಯ ತಪಾಸಣಾ ಶಿಭಿರದ ಸಭಾಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಸಂಘದ ಕ್ಯಾಲಂಡರನ್ನು ಬಿಡುಗಡೆಗೊಳಿಸಿ ಸಾಧಕರನ್ನು ಸನ್ಮಾನಿಸಿ ಮಾತನಾಡುತ್ತಾ ಅಧ್ಯಕ್ಷರಾದ ಪಿ. ದೇವದಾಸ್ ಎಲ್. ಕುಲಾಲ್ ಅವರು ಮಂಗಳೂರಲ್ಲಿ ಕುಲಾಲ ಭವನ ಕೊನೆಯ ಹಂತದಲ್ಲಿದೆ, ಇದನ್ನು ಲೋಕಾರ್ಪಣೆಗೈಯಲು ನಿಮ್ಮೆಲ್ಲರ ಸಹಕಾರ ಅಗತ್ಯ. ಜ್ಯೋತಿ ಕ್ರೇಡಿಟ್ ಸೊಸೈಟಿ ಇದೀಗ ಪೂನಾದಲ್ಲಿಯೂ ಶಾಖೆಯನ್ನು ಪ್ರಾರಂಬಿಸಿದ್ದು ಇದನ್ನು ಬ್ಯಾಂಕ್ ಆಗಿ ಪರಿವರ್ತಿಸಲು ಎಲ್ಲರೂ ಸಹಕರಿಸಬೇಕು. ಅಮೂಲ್ಯ ಪತ್ರಿಕೆಗೆ ಅಲ್ಲದೆ ಧಾರ್ಮಿಕ ಕಾರ್ಯಗಳಿಗೂ ನಾವೆಲ್ಲರೂ ಕೈಜೋಡಿಸುದರ ಮೂಲಕ ಹಿರಿಯರ ಕನಸನ್ನು ಕಾರ್ಯರೂಪಕ್ಕೆ ತರೋಣ ಎಂದರು.

ಕುಲಾಲ ಭವನ ದ ಸಮಿತಿ ಹಾಗೂ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಅವರು ಮಾತನಾಡುತ್ತಾ ಜ್ಯೋತಿ ಕ್ರೆಡಿಟ್ ಸೊಸೈಟಿ ಈಗಾಗಲೇ ಆರು ಶಾಖೆಗಳನ್ನು ಹೊಂದಿದ್ದು ಸಮಾಜ ಬಾಂಧವರು ಇದರ ಪ್ರಯೋಜನವನ್ನು ಪಡೆಯಬೇಕೆಂದರು. ಹಂತಿಮ ಘಟ್ಟದಲ್ಲಿರುವ ಕುಲಾಲ ಭವನಕ್ಕೆ ದೇಣಿಗೆ ನೀಡದವರು ದೇಣಿಗೆ ನೀಡುವುದರ ಮೂಲಕ ಸಹಕರಿಸಬೇಕಾಗಿದೆ. ನಮ್ಮ ಸಂಘದ ಸ್ಥಳೀಯ ಸಮಿತಿಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು ಅವರೊಂದಿಗೆ ಯುವ ಜನಾಂಗವೂ ಅಧಿಕ ಸಂಖ್ಯೆಯಲ್ಲಿ ಕ್ರೀಯಾಶೀಲರಾಗಬೇಕು ಎಂದು ವಿನಂತಿಸಿದರು.

ಅಮೂಲ್ಯ ಪತ್ರಿಕೆಯ ಸಂಪಾದಕರಾದ ಶಂಕರ್ ವೈ ಮೂಲ್ಯ ಕಳೆದ ಸುಮಾರು ಐವತ್ತು ವರ್ಷಗಳಿಂದ ಮುಂಬಯಿಯಲ್ಲಿ ಕನ್ನಡವನ್ನು ಉಳಿಸಲು ಅಮೂಲ್ಯ ಪತ್ರಿಕೆಯು ಪ್ರಾರಂಭವಾಗಿದ್ದು ಇಂದಿನ ಯುವ ಪೀಳಿಗೆಯು ಇದನ್ನು ಅಧಿಕ ಸಂಖ್ಯೆಯಲ್ಲಿ ಓದಬೇಕಾಗಿದೆ ಎನ್ನುತ್ತಾ ಸಧ್ಯದಲ್ಲೇ ಉದಯ ಮಣಿಯವರು ಭಕ್ತ ಕುಂಬಾರವನ್ನು ಯಕ್ಷಗಾನ ರೂಪದಲ್ಲಿ ಲೋಕಾರ್ಪಣೆ ಮಾಡಲಿದ್ದು ಅದಕ್ಕೂ ಪ್ರೋತ್ಸಾಹಿಸಬೇಕಾಗಿದೆ ಎಂದರು.

ಸಂಘದ ಉಪಾಧ್ಯಕ್ಷರಾದ ರಘು ಎ. ಮೂಲ್ಯ ಅವರು ಮಾತನಾಡುತ್ತಾ ನಮ್ಮವರು ಹೆಚ್ಚಿನವರು ಉತ್ತಮ ಶಿಕ್ಷಣವನ್ನು ಪಡೆದವರು. ಸಮಾಜದ ಸಾಧಕರನ್ನು ಸನ್ಮಾನಿಸುತ್ತಿರುವುದು ಅಭಿನಂದನೀಯ. ಸಂಘದಲ್ಲಿ ಪದವಿಯಲ್ಲಿ ಇಲ್ಲದವರು ಕೂಡಾ ಕ್ರೀಯಾಶೀಲರಾಗಿ ಸಂಘದ ಬೆಳವಣಿಗೆಗೆ ದುಡಿಯಬೇಕೆಂದರು.

ಕುಲಾಲ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್. ಗುಜರನ್, ಅವರು ಮಾತನಾಡುತ್ತಾ ಇಂದು ಮಹಿಳೆಯರು ಪುರುಷರಿಗಿಂದ ಅಧಿಕ ಸಂಖ್ಯೆಯಲ್ಲಿದ್ದುದನ್ನು ನೋಡಿ ಸಂತೋಷವಾಗುತ್ತಿದೆ, ನಮ್ಮ ಪುರುಷರು ಮಹಿಳೆಯರನ್ನು ಸಮಾಜದ ಕಾರ್ಯದಲ್ಲಿ ಕ್ರೀಯಾಶೀಲರಾಗುವಂತೆ ಮಾಡಲು ಅವಕಾಶ ನೀಡುತ್ತಿರುವುದು ಇಲ್ಲಿ ಕಾಣುತ್ತಿದೆ. ಕುಲಾಲ ಭವನಕ್ಕೆ ನಾವೆಲ್ಲರೂ ಸಹಕರಿಸೋಣ ಎಂದರು.

ಕುಲಾಲ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್ ಮಾತನಾಡಿ ಈ ಸ್ಥಳೀಯ ಸಮಿತಿಯ ಆರನೆಯ ವಾರ್ಷಿಕ ಸಮಾರಂಭಕ್ಕೆ ದುಡಿದ ಎಲ್ಲರಿಗೂ ಅಭಿನಂದಿಸಿದರು. ನಾವೆಲ್ಲರೂ ಹಿರಿಯರ ಮಾರ್ಗದಶನವನ್ನು ಪಡೆದು ಒಂದಾಗಿ ದುಡಿಯೋಣ ಎಂದರು.

ಗೌರವ ಕೋಶಾಧಿಕಾರಿ ಜಯ ಎಸ್. ಅಂಚನ್, ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿ ಮಾತನಾಡುತ್ತಾ ಈ ಸಂಘಟನೆಯನ್ನು ಸ್ಥಾಪಿಸಿದ ನಮ್ಮ ಹಿರಿಯರ ಕಾರ್ಯ ಅಭಿನಂದನೀಯ. ಸಂಘದ ಸದಸ್ಯರಾಗದವರು ಸದಸ್ಯರಾಗಬೇಕೆಂದು ವಿನಂತಿಸುತ್ತಾ ನಮ್ಮ ಯುವ ಜನಾಂಗವು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಯಾಶೀಲರಾಗುದರೊಂದಿಗೆ ಈ ಸಂಘವು ಇನ್ನೂ ಪ್ರಗತಿ ಹೊಂದಲಿ ಎಂದರು.

ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ಬಿ. ಸಾಲ್ಯಾನ್ ಅವರು ಎಲ್ಲರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಸಂಘದ ಹಿರಿಯ ಕಾರ್ಯಕರ್ತ ಹಾಗೂ ಜ್ಯೋತಿ ಕ್ರೆಡಿಟ್ ಸೊಸೈಟಿಯ ನಿವೃತ್ತ ಉದ್ಯೋಗಿ ರಮೇಶ್ ಮೂಲ್ಯ ಮತ್ತು ಪರಿವಾರ, ಹಿರಿಯ ಕಾರ್ಯಕರ್ತ ಹಾಗೂ ಜ್ಯೋತಿ ಕ್ರೆಡಿಟ್ ಸೊಸೈಟಿಯ ಉದ್ಯೋಗಿ ಕರುಣಾಕರ ಬಿ. ಕುಲಾಲ್ ದಂಪತಿ, ರಂಗ ಕಲಾವಿದ, ಹಲವು ನಾಟಕಗಳ ರಚನೆಗಾರ ಉದಯ್ ಮಣಿ ಮತ್ತು ಪರಿವಾರ ಇವರನ್ನು ಸನ್ಮಾನಿಸಲಾಯಿತು.

ಶ್ರೀಮತಿ ವಿಜಯ, ಶ್ರೀಮತಿ ರತ್ನ ಡಿ. ಕುಲಾಲ್ ಮತ್ತು ದಿನೇಶ್ ಕುಲಾಲ್ ಅವರು ಸನ್ಮಾನಿತರನ್ನು ಪರಿಚಯಿಸಿದರು. ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳನ್ನು ಹಾಗೂ ಪದಾಧಿಕಾರಿಗಳನ್ನೂ ಗೌರವಿಸಲಾಯಿತು.

ವಿವಿಧ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ತೇರ್ಗಡೆ ಹೊಂದಿದ ಸಮಾಜದ ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಯಿತು.

ಬೆಳಿಗ್ಗಿನಿಂದ ಉಚಿತ ಆರೋಗ್ಯ ತಪಾಸಣಾ ಶಿಭಿರ ನಡೆದಿದ್ದು ಡಾ. ಮೊನಪ್ಪ ಮೂಲ್ಯ, ಡಾ. ಸಹನಾ ಸಾಯಿನಾಥ್ ಸಾಲ್ಯಾನ್, ಡಾ. ಸೋಹನ್ ಎಸ್. ಮೂಲ್ಯ ಇವರು ಇದರ ನೇತೃತ್ವವನು ವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English