ಮೈಸೂರು: ಇಂದಿನಿಂದ ಮೈಸೂರಿನ ಸಿ.ಎಫ್.ಟಿ.ಆರ್.ಐ ಸಹಯೋಗದೊಂದಿಗೆ ನಡೆಯುತ್ತಿರುವ 8ನೇ ಅಂತಾರಾಷ್ಟ್ರೀಯ ಆಹಾರ ಅಧಿವೇಶನ ಉದ್ಘಾಟನೆಗೊಂಡಿತು.
ಅಧಿವೇಶನ ಉದ್ಘಾಟಸಿ ಮಾತನಾಡಿದ ಎನ್.ಐ.ಎಫ್.ಟಿ.ಇ.ಎನ್ ಕುಲಪತಿ ಪ್ರೊ. ಚಂಡಿ ವಸುದೇವಪ್ಪ, ಆಹಾರ ಸಂಶೋಧನಾಲಯಗಳ ಬಗ್ಗೆ ಸಾರ್ವಜನಿಕರಲ್ಲಿ ಮೊದಲು ಜಾಗೃತಿ ಮೂಡಬೇಕು. ಜೊತೆಗೆ ಯುವಕರು ಮೊದಲು ಜಾಗೃತರಾಗಬೇಕು. ಸರ್ಕಾರಿ ಉದ್ಯೋಗಳನ್ನು ಕಾಯುತ್ತ ಕೂರಬಾರದು. ತಮ್ಮ ಕಾಯಕವನ್ನು ತಾವೇ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು .
ಈ ಸಮ್ಮೇಳನದಲ್ಲಿ ಸುಮಾರು 2000ಕ್ಕೂ ಹೆಚ್ಚು ಸಂಶೋಧಕರು ಭಾಗವಹಿಸಿದ್ದು, 150 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ ಮಂಡಿಸಲಿದ್ದಾರೆ. ಡಿಸೆಂಬರ್12 ರಿಂದ 15 ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ 100 ಜನ ತಜ್ಞರಿಂದ ವಿವಿಧ ರೀತಿಯ ಹೊಸ ತಂತ್ರಜ್ಞಾನಗಳ ವಿಷಯದ ಬಗ್ಗೆ ಪ್ರಬಂಧ ಮಂಡನೆಯಾಗಲಿವೆ. ಜೊತೆಗೆ ಡಿಸೆಂಬರ್ 14 ಮತ್ತು 15 ರಂದು ಬೆಳಗ್ಗೆ 9 ರಿಂದ 5 ಗಂಟೆವರೆಗೆ ಆಹಾರ ವಿಜ್ಞಾನ ಹಾಗೂ ತಂತ್ರಜ್ಞಾನದ ಬಗ್ಗೆ 80 ವಿವಿಧ ಮಳಿಗೆಗಳಲ್ಲಿ ಆಹಾರಕ್ಕೆ ಸಂಬಂಧಿಸಿದ ಹೊಸ ಅನ್ವೇಷಣೆಗಳ ಪ್ರದರ್ಶನ ನಡೆಯಲಿದೆ.
Click this button or press Ctrl+G to toggle between Kannada and English