ಆಸ್ತಿ ತೆರಿಗೆ ಪಾವತಿಸದೇ ಇದ್ದಲ್ಲಿ ದಂಡ ಹಾಗೂ ಜಫ್ತಿ ಕ್ರಮ ಜಾರಿ

8:36 PM, Thursday, December 13th, 2018
Share
1 Star2 Stars3 Stars4 Stars5 Stars
(No Ratings Yet)
Loading...

BBMPಬೆಂಗಳೂರು : ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ಈವರೆಗೆ ಪಾವತಿಸದೇ ಇರುವ ಕಟ್ಟಡಗಳ ಮಾಲೀಕರು ಕೂಡಲೇ ಆಸ್ತಿ ತೆರಿಗೆ ಪಾವತಿಸದೇ ಇದ್ದಲ್ಲಿ ದಂಡ ಹಾಗೂ ಜಫ್ತಿ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ವಲಯದ ಜಂಟಿ ಆಯುಕ್ತ ಎನ್. ಸಿ. ಜಗದೀಶ್ ಹಾಗೂ ಉಪ ಆಯುಕ್ತ ಕೆ. ಶಿವೇಗೌಡ ಅವರು ತೆರಿಗೆ ಪಾವತಿಸದೇ ಸುಸ್ತಿದಾರರಾಗಿರುವ ಕಟ್ಟಡ ಮಾಲೀಕರಿಗೆ ಎಚ್ಚರಿಸಿದ್ದಾರೆ.

ಮಹದೇವಪುರ ವಲಯದ ಹೂಡಿ, ವೈಟ್‌ಫೀಲ್ಡ್, ಮಾರತ್‌ಹಳ್ಳಿ, ಕೆ.ಆರ್.ಪುರ, ಹೊರಮಾವು ಮತ್ತು ಹೆಚ್.ಎ.ಎಲ್ ಸೇರಿದಂತೆ ಒಟ್ಟು ಆರು ಕಂದಾಯ ಉಪ ವಿಭಾಗಗಳಲ್ಲಿ 2018-19ನೇ ಸಾಲಿನ ಆಸ್ತಿ ತೆರಿಗೆ ಬೇಡಿಕೆ ೫೫೬ ಕೋಟಿ ರೂ ಹಾಗೂ ಬಾಕಿ ಆಸ್ತಿ ತೆರಿಗೆ ಬೇಡಿಕೆ 244 ಕೋಟಿ ರೂ ಒಳಗೊಂಡಂತೆ ಒಟ್ಟು ವಸೂಲಿ ಮಾಡಬೇಕಾಗಿರುವ ಆಸ್ತಿ ತೆರಿಗೆಯ ಮೊತ್ತ 800 ಕೋಟಿ ರೂ ಆಗಿದೆ. ಈವರೆಗೆ ವಸೂಲಿಯಾಗಿರುವ ಆಸ್ತಿ ತೆರಿಗೆ ಮೊತ್ತ ೫೧೧.೫೯ ಕೋಟಿ ರೂ. ಆಗಿದ್ದು, ವಸೂಲಿ ಮಾಡಬೇಕಾಗಿರುವ ಮೊತ್ತ 288.41 ಕೋಟಿ ರೂ ಆಗಿದೆ. ಅತೀ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರು ಹಾಗೂ ಅನುಭವದಾರರ ವಿವರಗಳನ್ನು ಈಗಾಗಲೇ ವಾರ್ಡ್ ಕಚೇರಿಗಳಲ್ಲಿ, ಉಪ ವಿಭಾಗಗಳ ಕಚೇರಿಗಳಲ್ಲಿ ಮತ್ತು ವಲಯ ಕಚೇರಿಯಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ.

ಕಾರಣ ಕೇಳಿ ನೋಟೀಸ್ ಜಾರಿ ! ಟಾಪ್-500 ಬಾಕಿ ಸುಸ್ಥಿದಾರರು !! ಜಪ್ತಿ ವಾರೆಂಟ್ ಜಾರಿ !!!

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಒಟ್ಟು ೯೮೯೧ ಕಟ್ಟಡಗಳ ಮಾಲೀಕರಿಗೆ ಕಾರಣ ಕೇಳಿ ನೋಟೀಸ್‌ಗಳನ್ನು ಜಾರಿಗೊಳಿಸಲಾಗಿದೆ. ಆರು ಉಪ ವಿಭಾಗಗಳಿಂದ ಟಾಪ್-500 ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ ಸುಸ್ಥಿದಾರರ ಪಟ್ಟಿ ಮಾಡಲಾಗಿದೆ. ಅತೀ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 100 ಕ್ಕೂ ಹೆಚ್ಚು ಸುಸ್ಥಿದಾರರಿಗೆ ಜಪ್ತಿ ವಾರೆಂಟನ್ನು ಜಾರಿಗೊಳಿಸಲಾಗಿದೆ.

ಜಪ್ತಿ ಮಾಡುವುದಕ್ಕೆ ಮೊದಲೆ ಬಹುತೇಕ ಜಪ್ತಿ ವಾರೆಂಟ್ ಜಾರಿಗೊಳಿಸಿದ ಕೂಡಲೇ ಕೆಲವು ಆಸ್ತಿದಾರರು ಆಸ್ತಿ ತೆರಿಗೆಯನ್ನು ಪಾವತಿಸಲು ಮುಂದಾಗಿದ್ದಾರೆ. ಇನ್ನೂ ಉಳಿದ ಸುಸ್ಥಿದಾರರಿಗೂ ಕೂಡ ಜಪ್ತಿ ವಾರೆಂಟ್‌ಗಳನ್ನು ಜಾರಿಗೊಳಿಸುವ ಪ್ರಕ್ರಿಯೆ ಮುಂದುವರೆಯುತ್ತಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English