ಕುಕ್ಕೆ: ಸಂಭೃಮದ ಷಷ್ಠಿ, ಪಂಚಮಿ ರಥೋತ್ಸವ- ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯ್ತು ಬ್ರಹ್ಮರಥೋತ್ಸವ

8:58 PM, Thursday, December 13th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Kukke shashti ಸುಬ್ರಹ್ಮಣ್ಯ: ಐತಿಹಾಸಿಕ ಉತ್ಸವಕ್ಕೆ ಸಾಕ್ಷಿಯಾಯಿತು ಗುರುವಾರ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಮಹಾರಥೋತ್ಸವ. ೪೦೦ ವರ್ಷಗಳ ಇತಿಹಾಸವಿರುವ ಕುಕ್ಕೆ ಬ್ರಹ್ಮರಥದಲ್ಲಿ ಕೊನೆಯ ಭಾರಿಗೆ ಶ್ರೀ ಸುಬ್ರಹ್ಮಣ್ಯ ದೇವರ ರಥಾರೂಡರಾದರು. ಮುಂದಿನ ಜಾತ್ರೆಗೆ ಹೊಸ ಬ್ರಹ್ಮರಥ ನಿರ್ಮಾಣವಾಗಲಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರೆ ಪ್ರಯುಕ್ತ ಬುಧವಾರ ರಾತ್ರಿ ಪಂಚಮಿ ಹಾಗೂ ಶುಕ್ರವಾರ ಬೃಹ್ಮರಥೋತ್ಸವು ವೈಭವದಿಂದ ನೆರವೇರಿತು. ಆಗಮಿಸಿದ ಅಪಾರ ಭಕ್ತರು ಶ್ರೀದೇವರ ಮಹಾರಥೊತ್ಸವದಲ್ಲಿ ಪಾಲ್ಗೊಂಡರು. ಷಷ್ಠಿ ರಥೋತ್ಸವದ ವೇಳೆ ಸುಮಾರು ೯೮ ಮಂದಿ ಭಕ್ತರು ಮಹಾರಥೋತ್ಸವ ಸೇವೆ ನಡೆಸಿದರು. ಷಷ್ಠಿಯ ದಿನ ಮಹಾಪೂಜೆಯ ಬಳಿಕ ಹೊರಾಂಗಣದಲ್ಲಿ 360 ಭಕ್ತಾಧಿಗಳು ಎಡೆಸ್ನಾನ ಸೇವೆ ನೆರವೇರಿಸಿದರು.
ದೇಗುಲದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು. ಬಳಿಕ ಬೆಳಗ್ಗೆ 6.41ರ ವೃಶ್ಚಿಕ ಲಗ್ನದಲ್ಲಿ ರಥೋತ್ಸವ ನೆರವೇರಿತು. ಈ ವೇಳೆ ನಾಗಸ್ವರ, ಪಂಚವಾದ್ಯ, ಬ್ಯಾಂಡ್, ಜಾಗಟೆ, ಶಂಖ ವಾದ್ಯ ಮತ್ತು ಚೆಂಡೆ ವಾದನಗಳ ಹಿಮ್ಮೇಳದಲ್ಲಿ ಸಾಲಾಂಕೃತ ಆನೆ, ಬಿರುದಾವಳಿ, ಭಕ್ತಜನರ ಜಯಘೋಷದ ನಡುವೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರು ಬ್ರಹ್ಮರಥಾರೂಢರಾದರು. ಬಳಿಕ ಮಹಾ ಮಂಗಳಾರತಿ ನೆರವೇರಿತು. ಬಳಿಕ ಭಕ್ತಾಧಿಗಳಿಗೆ ಧನ, ಕನಕ, ಹೂವು, ಫಲವಸ್ತು ಪ್ರಸಾದಗಳನ್ನು ಅರ್ಚಕರು ರಥದಿಂದ ಎಸೆದರು. ನಾಡಿನ ಭಕ್ತರು ರಥೋತ್ಸವ ವೀಕ್ಷಿಸಿದರು. ಭಕ್ತರು ರಥಕ್ಕೆ ಸಾಸಿವೆ, ನಾಣ್ಯ ಏಲಕ್ಕಿ ಕಾಳು ಮೆಣಸು ಇತ್ಯಾದಿ ಧಾನ್ಯಗಳನ್ನು ಎಸೆದರು.

Kukke shashti ಪಂಚಮಿ ಮತ್ತು ಷಷ್ಠಿಯಂದು ದೇಗುಲದ ಅನ್ನಛತ್ರ ಹಾಗೂ ಅಂಗಡಿಗುಡ್ಡೆಯ ವಿಶಾಲವಾದ ಸುಸಜ್ಜಿತ ಸ್ಥಳದಲ್ಲಿ ಸಹಸ್ರಾರು ಮಂದಿ ಅನ್ನಪ್ರಸಾದ ಸೇವನೆ ಮಾಡಿದರು. ಅನ್ನದಾನ ವ್ಯವಸ್ಥೆ ಈ ಭಾರಿ ಬಹಳ ಅಚ್ಚುಕಟ್ಟಾಗಿತ್ತು. ಅನ್ನ ಪ್ರಸಾದದ ವೇಳೆ ಕೊಳ್ಳೆಗಾಲ ಸುಬ್ಬಶೆಟ್ಟಿ ಅವರ ಸ್ಮರಣಾರ್ಥ ಅವರ ಸಹೋದರ ರಾಧಾಕೃಷ್ಣ ಅವರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಹಿತಿಂಡಿ ನೀಡಿದರು. ಸ್ಥಳಿಯ ಶಿಕ್ಷಣ ಸಂಸ್ಥೆಯವರು, ನಗರ ಹಾಗೂ ಸುತ್ತಮುತ್ತಲಿನ ಭಾಗಗಳ ವಿವಿಧ ಸಂಘ ಸಂಸ್ಥೆಗಳು ಸ್ವಯಂ ಸೇವಕರಾಗಿ ಜಾತ್ರೆ ನಡೆಯುವ ಮೂರು ದಿನಗಳಲ್ಲಿ ತೊಡಗಿಸಿಕೊಂಡಿದ್ದರು.

ಚಂಪಾಷಷ್ಠಿ ರಥೋತ್ಸವದ ವೇಳೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ಪ್ರಮೀಳ, ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಧೀಶ ಸತ್ಯನಾರಾಯಣ, ಸುಳ್ಯ ನ್ಯಾಯಾಧೀಶ ಪುರುಷೋತ್ತಮ, ಪುತ್ತೂರು ಸಹಾಯಕ ಆಯುಕ್ತ ಕೃಷ್ಣಮೂರ್ತಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾರ್ಯನಿರ್ವಾಹಣಾಧಿಕಾರಿ ಎಚ್ ಎಂ ರವೀಂದ್ರ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಪೆರಾಲ್, ನೂತನ ಬ್ರಹ್ಮರಥ ದಾನಿ ಉದ್ಯಮಿ ಅಜಿತ್ ರೈ. ಎಂ.ಬಿ ಸದಾಶಿವ ಮೊದಲಾದವರು ಉಪಸ್ಥಿತರಿದ್ದರು. ಪಂಚಮಿ ಮತ್ತು ಚೌತಿ ದಿನಗಳಲ್ಲಿ ಮಾಜಿ ಸಚಿವ ರಮಾನಾಥ ರೈ, ವಿಧಾನಪರಿಷತ್ ಮಾಜಿ ಸದಸ್ಯ ಮುಖ್ಯಮಂತ್ರಿ ಚಂದ್ರು ಸಹಿತ ಹಲವು ಮಂದಿ ಗಣ್ಯರು ದೇಗುಲಕ್ಕೆ ಭೇಟಿ ಇತ್ತರು.

Kukke shashti ಜಾತ್ರೆ ಪ್ರಯುಕ್ತ ದೇಗುಲ ಹಾಗೂ ವಿವಿಧ ಇಲಾಖೆಗಳು, ಸಂಘಸಂಸ್ಥೆಗಳ ಸಹಾಯೋಗದಲ್ಲಿ ಕೃಷಿ ಮೇಳ ಆಯೋಜಿಸಲಾಗಿತ್ತು. ಕೃಷಿ ಮೇಳವನ್ನು ಮಾಜಿ ಸಚಿವ ರಮಾನಾಥ ರೈ ಉದ್ಘಾಟಿಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ವ್ಯವಸ್ಥಾಪನ ಸಮಿತಿ ಸದಸ್ಯರು. ದೇಗುಲದ ಕಾರ್ಯನಿರ್ವಾಹಣಾಧಿಕಾರಿಗಳು, ಸಹಾಯಕ ಕಾರ್ಯನಿರ್ವಾಹಣಾಧಿಕಾರಿಗಳು, ವ್ಯವಸ್ಥಾಪನ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಮುಖ್ಯಸ್ಥರು, ಸಂಘಸಂಸ್ಥೆಯವರು ಉಪಸ್ಥಿತರಿದ್ದರು.

ಕೃಷಿ ಮೇಳದಲ್ಲಿ ವಿವಿಧ ಬಗೆಯ ಬಿತ್ತನೆ ಬೀಜಗಳ ಪ್ರದರ್ಶನ ಮತ್ತು ಮಾರಾಟ, ಗಿಡಮೂಲಿಕೆಗಳ ಔಷಧಿಗಳು, ಕೃಷಿ ಉತ್ಪನ್ನಗಳು, ಹಾಲು ಕರೆಯುವ ಯಂತ್ರ, ಔಷಧಿ ಸಿಂಪಡಿಸುವ ಯಂತ್ರ. ವಿವಿಧ ಜಾತಿಯ ಗಿಡಗಳು ಇತ್ಯಾದಿಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ತೆರೆಯಾಗಿತ್ತು, ವಿವಿಧ ಜಾತಿಯ ಕಾಡುತ್ಪತ್ತಿ ಗಿಡಗಳ ಪ್ರದರ್ಶನ, ವಿವಿಧ ಭತ್ತದ ತಳಿಗಳು, ಹಾಗೂ ನಾಟಿ ಪದ್ಧತಿಯ ಪ್ರಾತ್ಯಕ್ಷಿತೆ ಪುಸ್ತಕ ಮಳಿಗೆ ಹಾಗೂ ಪ್ರಾಚೀನ ವಸ್ತುಗಳ ಪ್ರದರ್ಶನ ಗಮನಸೆಳೆಯಿತು. ಕೃಷಿ ಚಟುವಟಿಕೆಗಳಿಗೆ ಬಳಸುವ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟಗಳುನಡೆದವು. ಕೃಷಿ ಮೇಳದಲ್ಲಿ ಸುಳ್ಯ ಕೃಷಿ ಇಲಾಖೆ, ಅರಣ್ಯ ಇಲಾಖೆ, ಮಂಗಳೂರಿನ ಕೃಷಿ ಪ್ರಾಧಿಕಾರ, ಪುತ್ತೂರು ಗೇರು ಸಂಶೋಧನ ಕೇಂದ್ರ, ಜೇನು ಸಹಕಾರಿ ಸಂಘ, ಪಶುಸಂಗೋಪಾನ ಇಲಾಖೆ ಸುಳ್ಯ, ಬಿಳಿನೆಲೆ ಕಿದುವಿನ ಸಿಪಿಸಿಆರ್‌ಐ, ಕ್ಷೀರಾ ಸಾಮಾಗ್ರಿಗಳ ವಿತರಣ ಸಂಸ್ಥೆ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಜೇಸಿಐ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಜಲಾನಯನ ಸಮಿತಿಗಳು ಕೃಷಿ ಮೇಳದಲ್ಲಿ ಪಾಲ್ಗೊಂಡಿದ್ದವು.
Kukke shashti
ಇಂದು ನೌಕವಿಹಾರ
ಇಂದು ಶ್ರೀ ಸುಬ್ರಹ್ಮಣ್ಯ ದೇವರ ಆವಭ್ರತೋತ್ಸವ ಮತ್ತು ನೌಕವಿಹಾರ ಕುಮಾರಧಾರ ಪುಣ್ಯ ನದಿಯಲ್ಲಿ ನಡೆಯಲಿದೆ. ಈ ವೇಳೆ ದೇಗುಲದ ಯಶಸ್ವಿ ಆನೆಯ ಜಲಕ್ರೀಡೆಯಲ್ಲಿ ಸಂಭ್ರಮಿಸುವುದು ಮನಸೆಳೆಯುತ್ತದೆ. ಈ ದಿನ ಸ್ಥಳಿಯ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುತ್ತಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English