ಕೆಎಸ್ಐಸಿ ಸಂಸ್ಥೆ ವತಿಯಿಂದ ಮೈಸೂರು ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ..!

10:08 AM, Friday, December 14th, 2018
Share
1 Star2 Stars3 Stars4 Stars5 Stars
(No Ratings Yet)
Loading...

silk-sareeಮಂಗಳೂರು: ರೇಷ್ಮೆ ಸೀರೆಗಳು ಮಧ್ಯಮವರ್ಗದವರ ಕೈಗೆಟಕುವುದಿಲ್ಲ ಎಂದುಕೊಂಡಿದ್ದರೆ ನಿಮ್ಮ ಆಲೋಚನೆ ಪಕ್ಕಕ್ಕಿಡಿ. ಮಹಿಳೆಯರ ಅಚ್ಚು ಮೆಚ್ಚಿನ ರೇಷ್ಮೆ ಸೀರೆಗಳು ಈಗ ಅಗ್ಗದ ಬೆಲೆಯಲ್ಲಿ ಸಿಗುತ್ತಿವೆ.

ಮೈಸೂರು ಸಿಲ್ಕ್ ಸಂಸ್ಥೆ ಈ ಒಂದು ಆಫರ್ ಕೊಟ್ಟಿದೆ. ಬಡವರಿಗೂ, ಮಧ್ಯಮ ವರ್ಗದವರಿಗೂ ಕೈಗೆಟುಕುವ ದರದಲ್ಲಿ ಕೆಎಸ್ ಐಸಿ ಸಂಸ್ಥೆ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಮಾಡುತ್ತಿದೆ.

ನಗರದ ಲಾಲ್ ಬಾಗ್ ನಲ್ಲಿರುವ ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿಯಲ್ಲಿ ಕರ್ನಾಟಕದ ಪಾರಂಪರಿಕ ಉತ್ಪನ್ನ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್ ಉದ್ಘಾಟಿಸಿದರು.

ಈ ಮಾರಾಟ ಮತ್ತು ಪ್ರದರ್ಶನ ಮಳಿಗೆಯಲ್ಲಿ ಕೆಎಸ್ ಐಸಿ ಕ್ರೇಪ್ ಡಿ ಚೈನ್, ಜಾರ್ಜೆಟ್, ಟಿಶ್ಶು ಮತ್ತು ಸಾದಾ ಮುದ್ರಿತ ಸೀರೆಗಳು ಲಭ್ಯವಿದೆ. 13,000 ರೂ. ನಿಂದ 1,20,000 ರೂ. ಬೆಲೆಯ ಪುಸ್ತಕಗಳು ಲಭ್ಯವಿದೆ. ಅಲ್ಲದೆ 25% ವರೆಗೆ ವಿಶೇಷ ರಿಯಾಯಿತಿಯೂ ಲಭ್ಯವಿದೆ.

ಇಂದಿನಿಂದ 17 ತಾರೀಕಿನವರೆಗೆ ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ಐದು ದಿನಗಳ ಕಾಲ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

silk-saree1

silk-saree2

silk-saree3

silk-saree4

silk-saree5

silk-saree--7

silk-saree--8

silk-saree--9

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English