ಜೈಪುರ: ಐಪಿಎಲ್ ಆರಂಭಕ್ಕೆ ಇನ್ನು ಕೆಲ ತಿಂಗಳು ಬಾಕಿ ಇರುವಂತೆ ಚಟುವಟಿಕೆಗಳು ಜೋರಾಗಿ ನಡೆಯುತ್ತಿದ್ದು, ಇಂದು ಜೈಪುರದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
ಈಗಾಗಲೇ ತಂಡದಲ್ಲಿ ಹಲವು ಆಟಗಾರರನ್ನು ಉಳಿಸಿಕೊಂಡಿರುವ ಫ್ರಾಂಚೈಸಿಗಳು ಇಂದಿನ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಲು ಪ್ಲಾನ್ ಮಾಡಿವೆ.
ವೆಸ್ಟ್ ಇಂಡೀಸ್ ತಂಡದ ಯುವ ಆಟಗಾರ ಶಿಮ್ರೋನ್ ಹೇಟ್ಮಯರ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆ ಇದೆ.
ಕೆಲ ತಿಂಗಳ ಹಿಂದೆ ಭಾರತ ಪ್ರವಾಸ ಕೈಗೊಂಡಿದ್ದ ವಿಂಡೀಸ್ ತಂಡದಲ್ಲಿ ಹೇಟ್ಮಯರ್ ಗಮನಾರ್ಹ ಪ್ರದರ್ಶನ ನೀಡಿದ್ದರು. ಮಧ್ಯಮ ಕ್ರಮಾಂಕ ಬ್ಯಾಟ್ ಬೀಸುವ ಹೇಟ್ಮಯರ್ ದೊಡ್ಡ ಹೊಡೆತ ಬಾರಿಸುವಲ್ಲಿ ನಿಸ್ಸೀಮ ಆಟಗಾರ.
ಟೀಮ್ ಇಂಡಿಯಾ ಆಂಗ್ಲರ ನಾಡಿನ ಪ್ರವಾಸ ಕೈಗೊಂಡಿದ್ದಾಗ ಎಲ್ಲರ ಹುಬ್ಬೇರಿಸಿದ್ದು ಇಂಗ್ಲೆಂಡ್ನ ಯುವ ಆಟಗಾರ ಸ್ಯಾಮ್ ಕರನ್. ಕೌಂಟಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡಕ್ಕೆ ಸೇರಿದ್ದ ಸ್ಯಾಮ್ ಪರ್ಫಾಮೆನ್ಸ್ ಅದ್ಭುತವಾಗಿಯೇ ಮುಂದುವರೆದಿದೆ. ಆಲ್ ರೌಂಡರ್ ಆಗಿರುವ ಸ್ಯಾಮ್ ಕರನ್ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿದ್ದಾರೆ.
ಕಳೆದ ಬಾರಿಯ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದ ಗಪ್ಟಿಲ್ ಆ ನಂತರದಲ್ಲಿ ರಾಷ್ಟ್ರೀಯ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಜೊತೆಗೆ ಕೆರಬಿಯನ್ ಪ್ರೀಮಿಯರ್ ಲೀಗ್ನಲ್ಲಿ 38 ಎಸೆತದಲ್ಲಿ ಭರ್ಜರಿ 102 ರನ್ ಸಿಡಿಸಿ ಮಿಂಚಿದ್ದರು. ಇವೆಲ್ಲವೂ ಮಾನದಂಡವಾದಲ್ಲಿ ಗಪ್ಟಿಲ್ ದೊಡ್ಡ ಮೊತ್ತಕ್ಕೆ ಹರಾಜಾಗಲಿದ್ದಾರೆ.
Click this button or press Ctrl+G to toggle between Kannada and English