ಆಳ್ವಾಸ್‌ನಲ್ಲಿ ಕ್ರಿಸ್ಮಸ್ ಸಂಭ್ರಮ 2018

12:28 PM, Friday, December 21st, 2018
Share
1 Star2 Stars3 Stars4 Stars5 Stars
(No Ratings Yet)
Loading...

christmasಮೂಡುಬಿದಿರೆ: ದ್ವೆಷ ಮತ್ತು ಧರ್ಮ ಹೀಗೆ ವಿಭಜಿಸುವ ಗೋಡೆಗಳನ್ನು ಕಿತ್ತೆಸೆದು ಮಾನವೀಯತೆ ಬೆಸೆಯುವ, ಬಂಧುತ್ವವನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ. ಬಂಧುತ್ವ ಎನ್ನುವುದು ಜಾತಿ, ಮತ ಧರ್ಮದ ಎಲ್ಲೆ ಮೀರಿದ ಸಂಬಂಧವಾಗಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಪೀಟರ್ ಪಾವ್ಲ್ ಸಲ್ದಾನ್ಹ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಗುರುವಾರ ಸಾಯಂಕಾಲ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ `ಆಳ್ವಾಸ್ ಕ್ರಿಸ್ಮಸ್ ಸಂಭ್ರಮ ೨೦೧೮’ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ನಾವೆಲ್ಲರೂ ಆತ್ಮ ಸಾಕ್ಷಿಗೆ ಸ್ಪಂದಿಸಿ ಒಳಿತನ್ನುಂಟು ಮಾಡುವ ಮತ್ತು ಆ ಮೂಲಕ ಯಾರೂ ಕಸಿದುಕೊಳ್ಳಲಾಗದ ನಿಜವಾದ ಶಾಂತಿಯನ್ನು ಬದುಕಿನಲ್ಲಿ ಅನುಭವಿಸುವವರಾಗಬೇಕು ನಮ್ಮ ನೆಲ, ಜಲ ಸಂರಕ್ಷಣೆ, ಪರಿಸರ ಪ್ರಿತಿ, ಶುದ್ಧತೆ ಸಂರಕ್ಷಣೆ ಎಲ್ಲರ ಆದ್ಯತೆಯಾಗಲಿ ಎಂದವರು ಹಾರೈಸಿದರು.

ಶಿರ್ವ ಡಾನ್ ಬೋಸ್ಕೊ ಸಿ.ಬಿ.ಎಸ್.ಸಿ ಸಂಸ್ಥೆಯ ಪ್ರಾಂಶುಪಾಲ ವಂ.ಮಹೇಶ್ ಡಿ’ಸೋಜ ಕ್ರಿಸ್ಮಸ್ ಸಂದೇಶ ನೀಡಿದರು. ಸ್ನೆÃಹಾಲಯ ಚಾರಿಟೇಬಲ್ ಟ್ರಸ್ಟ್ನ ಸ್ಥಾಪಕ ಜೋಸೆಫ್ ಡಿ’ ಸೋಜ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆವಹಿಸಿ ಮಾತನಾಡಿ ಆರೋಗ್ಯ ಮತ್ತು ಶಿಕ್ಷಣ ಕ್ಷೆತ್ರದಲ್ಲಿ ಕ್ರೆöಸ್ತರ ಕೊಡುಗೆ ಅನನ್ಯವಾದದ್ದು. ಮದರ್ ತೆರೆಸಾರವರಂತಹ ಸಂತೆಯ ಕೊಡುಗೆ ನಮ್ಮೆಲ್ಲರಿಗೂ ಸ್ಪೂರ್ತಿಯಾದರೆ ಶಾಂತಿ, ಪ್ರಿತಿ, ಸಹಬಾಳ್ವೆಯನ್ನು ಮಾತು ಕೃತಿಯಲ್ಲಿ ಪಾಲಿಸುತ್ತಿರುವ ಕ್ರೆಸ್ತರ ಜೀವನ ಸಂದೇಶ ಅರ್ಥಪೂರ್ಣವಾದದ್ದು ಎಂದರು.

ದಾಖಲಾತಿ ವಿಭಾಗದ ಅಧಿಕಾರಿ ಎಲ್.ಜೆ ಫೆರ್ನಾಂಡಿಸ್ ಸ್ವಾಗತಿಸಿದರು. ಉಪನ್ಯಾಸಕರಾದ ರಾಜೇಶ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಸ್ಟಾö್ಯನಿ ಸನ್ಮಾನ ಪತ್ರ ವಾಚಿಸಿದರು. ಆಳ್ವಾಸ್ ಕಾಲೇಜು ಪ್ರಾಂಶುಪಾಲ ಡಾ. ಕುರಿಯನ್ ವಂದಿಸಿದರು.

ಕ್ರಿಸ್ಮಸ್ ಸಂಭ್ರಮದ ಪ್ರಯುಕ್ತ ವಿದ್ಯಾಗಿರಿಯಲ್ಲಿರುವ ನುಡಿಸಿರಿ ವೇದಿಕೆಯನ್ನು (ರತ್ನಾಕರವರ್ಣಿ) ನಕ್ಷತ್ರ, ವಿಭಿನ್ನ ರೀತಿಯ ವಿದ್ಯುತ್ ದೀಪಾಲಂಕಾರ, ಅಲಂಕಾರಿಕ ವಸ್ತುಗಳಿಂದ ಶೃಂಗರಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕ್ರಿಸ್ಮಸ್ ವಿಶೇಷ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English