ಮಂಗಳೂರು: ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಮುಖ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ ಪ್ರಮುಖ ಆರೋಪಿಯನ್ನು ಬಜ್ಪೆಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಉಳಾಯಿಬೆಟ್ಟುವಿನ ಮೂಡುಜೆಪ್ಪುಮನೆಯ ಮಹಮ್ಮದ್ ಅಶ್ರಫ್ (25) ಬಂಧಿತ ಆರೋಪಿ.
ಈ ಹಿಂದೆ ಆರೋಪಿಯ ಪತ್ತೆಗೆ ಎಲ್.ಓ.ಸಿ ಪ್ರಕಟಣೆ ಹೊರಡಿಸಿದ ಮೇರೆಗೆ ಆರೋಪಿಯು ದುಬೈನಿಂದ ಮಂಗಳೂರು ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದಾಗ ವಶಕ್ಕೆ ಪಡೆದುಕೊಂಡು, ಕಾನೂನು ಕ್ರಮ ಜರುಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
Click this button or press Ctrl+G to toggle between Kannada and English