ರಮೇಶ್‌ ಜಾರಕಿಹೊಳಿ ಅವರನ್ನು ಸಂಪುಟದಿಂದ ತೆಗೆದು ಹಾಕಿದ್ದು ನನಗೆ ದುಃಖ ತಂದಿದೆ: ಲಕ್ಷ್ಮಿ ಹೆಬ್ಬಾಳ್‌ ಕರ್‌

3:45 PM, Saturday, December 22nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

laxmi-hebbalkarಬೆಂಗಳೂರು: ರಮೇಶ್‌ ಜಾರಕಿ ಹೊಳಿ ಅವರನ್ನು ಸಂಪುಟದಿಂದ ತೆಗೆದು ಹಾಕಿರುವುದು ನನಗೆ ವೈಯಕ್ತಿಕವಾಗಿ ತುಂಬಾ ದುಃಖ ತಂದಿದೆ ಎಂದು ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್‌ ಕರ್‌ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವರಿಷ್ಠರು 22 ರಂದು ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದಿದ್ದರು. ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಎಲ್ಲವೂ ಸುಖಾಂತ್ಯವಾಗಿದೆ ಎಂದರು.

ಹೈಕಮಾಂಡ್‌ ಏನು ಹೇಳುತ್ತದೆಯೋ ಅದನ್ನು ಕೇಳುವವಳು ನಾನು ,ಪಕ್ಷದ ಶಿಸ್ತಿನ ಸಿಪಾಯಿ,ಚೌಕಟ್ಟನ ಒಳಗೆ ಇರುವವಳು. ಎಂದೂ ಸಚಿವ ಹುದ್ದೆಯ ಆಕಾಂಕ್ಷಿ ಎಂದಿರಲಿಲ್ಲ ಎಂದರು.

ರಮೇಶ್‌ ಸರ್‌ ಅವರನ್ನು ಇಷ್ಟು ಬೇಗ ತೆಗೆದದ್ದು ನನಗೆ ಬಹಳಷ್ಟು ದುಃಖ ತಂದಿದೆ. ಅವರು 5 ನೇ ಬಾರಿಗೆ ಸಾಮಾನ್ಯ ಕ್ಷೇತ್ರದಲ್ಲಿ ಆರಿಸಿ ಬಂದವರು.ಅವರು ಹಿರಿಯರು ಅವರನ್ನು ಇಷ್ಟು ಬೇಗ ತೆಗೆಯಬಾರದಿತ್ತು ಎಂದರು.

ಸರ್ಕಾರ ಪಕ್ಷ ಸಂಘಟನೆ ಸುಭದ್ರವಾಗಿದೆ. ಬಿಜೆಪಿಯವರಿಗಾಗಲಿ, ಕಾಂಗ್ರೆಸ್‌ನವರಿಗಾಗಲಿ, ಯಾರಿಗೂ ಚುನಾವಣೆಗೆ ಹೋಗುವುದು ಇಷ್ಟವಿಲ್ಲ.ಈ ರಾಜ್ಯಕ್ಕೆ ಮತ್ತೊಂದು ಚುನಾವಣೆ ಬೇಡವಾಗಿದೆ ಎಂದರು.

ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವಿಚಾರದಲ್ಲಿ ಲಕ್ಷ್ಮಿ ಹೆಬ್ಬಾಳ್‌ಕರ್‌ ಮತ್ತು ರಮೇಶ್‌ ಜಾರಕಿಹೊಳಿ ಅವರ ನಡುವೆ ಭಾರಿ ಕದನ ನಡೆದಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English