ಪ್ರವಾಸ ಬಂದಿದ್ದ ಬೆಂಗಳೂರಿನ ಬಾಲಕಿ ಸೋಮೇಶ್ವರ ಬೀಚಿನಲ್ಲಿ ನೀರುಪಾಲು

4:32 PM, Monday, December 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

someshwaraಮಂಗಳೂರು: ಮಂಗಳೂರಿನ ಸೋಮೇಶ್ವರ ಬೀಚ್ಗೆ ಬಂದಿದ್ದ ಬೆಂಗಳೂರು ಮೂಲದ ಕುಟುಂಬ ಸಮುದ್ರದ ಸೆಳೆತಕ್ಕೆ ಸಿಲುಕಿದ ಪರಿಣಾಮ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ.

ನಾಲ್ಕು ವರುಷದ ಬಾಲಕಿ ಮೈತ್ರೇಯಿ ಕೇತ್ಕರ್ ಸಾವನ್ನಪ್ಪಿದ ಬಾಲಕಿ. ಬೆಂಗಳೂರಿನಿಂದ ಮಂಗಳೂರಿಗೆ ಪ್ರವಾಸ ಬಂದಿದ್ದ ಕುಟುಂಬ ಸೋಮೇಶ್ವರ ಬೀಚಿನಲ್ಲಿ ಮೋಜು ಮಾಡುತ್ತಿದ್ದ ವೇಳೆ ಸಮುದ್ರದ ಸೆಳೆತಕ್ಕೆ ಸಿಕ್ಕಿದೆ. ಚಿಂತಾಮಣಿ ಕೇತ್ಕರ್, ಶ್ರದ್ದಾ ಕೇತ್ಕರ್ ಮತ್ತು ಅವರ ಮಕ್ಕಳಾದ ಏಳು ವರ್ಷದ ಜಾರ್ಜಿ ಕೇತ್ಕರ್ ಹಾಗೂ ಮೈತ್ರೇಯಿ ಕೇತ್ಕರ್ ಸಮುದ್ರದ ಸೆಳೆತಕ್ಕೆ ಸಿಲುಕಿದ್ದರು.

ಸೋಮೇಶ್ವರ ಬೀಚಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೈಫ್ ಗಾರ್ಡ್ ಸಿಬ್ಬಂದಿ ಈ ಕುಟುಂಬ ಅಪಾಯದಲ್ಲಿರುವುದನ್ನು ಅರಿತು ಅವರ ರಕ್ಷಣೆ ಮಾಡಲು ಹೋಗಿ ಮೂವರನ್ನು ರಕ್ಷಿಸಿದೆ. ಆದರೆ ದುರಾದೃಷ್ಟವಶಾತ್ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಅಪಾಯದಲ್ಲಿದ್ದ ಕುಟುಂಬವನ್ನು ರಕ್ಷಿಸುವ ಸಂದರ್ಭದಲ್ಲಿ ಲೈಪ್ ಗಾರ್ಡ್ ಸಿಬ್ಬಂದಿಯೊಬ್ಬರ ತಲೆಗೆ ಗಾಯವಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English