ಹೊಸ ವರ್ಷದಿಂದ ಪ್ರೀಪೇಯ್ಡ್​ ವಿದ್ಯುತ್​​… ಪ್ರತಿ ತಿಂಗಳು ಮಾಡಿಸ್ಬೇಕು ರೀಚಾರ್ಜ್

9:50 AM, Tuesday, December 25th, 2018
Share
1 Star2 Stars3 Stars4 Stars5 Stars
(No Ratings Yet)
Loading...

meterದೆಹಲಿ: ದೇಶದಲ್ಲಿ ವಿದ್ಯುತ್ ಕಳ್ಳತನದಿಂದ ಸಾವಿರಾರು ಕೋಟಿಯಷ್ಟು ನಷ್ಟ ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ವಿದ್ಯುತ್ ಶುಲ್ಕ ಪಾವತಿಯನ್ನು ಇನ್ನಷ್ಟು ಸರಳೀಕರಗೊಳಿಸಲು ಕೇಂದ್ರ ವಿದ್ಯುತ್ ಇಲಾಖೆ ಮುಂದಾಗಿದೆ.

ಪ್ರತಿ ತಿಂಗಳು ವಿದ್ಯುತ್ ಶುಲ್ಕವನ್ನು ನಿಗದಿತ ದಿನಾಂಕದೊಳಗೆ ಪಾವತಿಸುವಂತಹ ಸ್ಮಾರ್ಟ್ ಪ್ರೀಪೇಯ್ಡ್ ಮೀಟರ್ಗಳು ಶೀಘ್ರದಲ್ಲೇ ಬರಲಿವೆ. 2019ರ ಏಪ್ರಿಲ್ 1 ರಿಂದ ದೇಶಾದ್ಯಂತ ಈ ಮೀಟರ್ಗಳು ಅಧಿಕೃತವಾಗಿ ಲಭ್ಯವಾಗಲಿದ್ದು, ಮೊಬೈಲ್ ಪ್ರೀಪೇಯ್ಡ್ ಸಿಮ್ಗೆ ರೀಚಾರ್ಜ್ ಮಾಡಿದಂತೆ ವಿದ್ಯುತ್ ಬಳಕೆಗೂ ಮುನ್ನ ಹಣ ಪಾವತಿಸಬಹುದಾಗಿದೆ.

ಸ್ಮಾರ್ಟ್ ಮೀಟರ್ಗಳು ಆ ದಿನದ ನಿಗದಿತ ವೇಳೆಯಲ್ಲಿ ಮೀಟರ್ ರೀಡ್ ಮಾಡಿ ಎಷ್ಟು ಯೂನಿಟ್ ಬಳಕೆ ಆಗಿದೆ ಎಂಬ ವಿವರವನ್ನು ವಿದ್ಯುತ್ ಪೂರೈಕೆದಾರ ಸಂಸ್ಥೆಗಳಿಗೆ ರವಾನಿಸುತ್ತವೆ. ಈ ಮಾಹಿತಿ ಗ್ರಾಹಕರಿಗೆ ವರ್ಗಾವಣೆಯಾಗಿ ಬಳಕೆಯ ಅನ್ವಯ ಶುಲ್ಕ ಕಡಿತ ಆಗಲಿದೆ. ಇದರಿಂದ ಜನರು ವಿದ್ಯುತ್ ಅನ್ನು ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಲಿದ್ದು, ಕಳ್ಳತನ ಮತ್ತು ಸೋರಿಕೆ ಆಗುವುದು ನಿಯಂತ್ರಣಕ್ಕೆ ಬರಲಿದೆ. ಪ್ರಸ್ತುತ ಸ್ಮಾರ್ಟ್ ಮೀಟರ್ಗಳ ಲಭ್ಯತೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಇವುಗಳ ಉತ್ಪನ್ನವನ್ನು ಹೆಚ್ಚಿಸಿ ದೇಶಾದ್ಯಂತ ದೊರೆಯಲಿವೆ ಎಂದು ವಿದ್ಯುತ್ ಖಾತೆಯ ರಾಜ್ಯ ಸಚಿವ ಆರ್.ಕೆ. ಸಿಂಗ್ ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English