ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರ ‘ದಿ ವೀಲ್‌ ಆಫ್ ಜಸ್ಟಿಸ್’ ಕೃತಿ ಬಿಡುಗಡೆ

10:15 AM, Tuesday, December 25th, 2018
Share
1 Star2 Stars3 Stars4 Stars5 Stars
(No Ratings Yet)
Loading...

virappa-moilyಮಂಗಳೂರು: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರ ‘ದಿ ವೀಲ್ ಆಫ್ ಜಸ್ಟಿಸ್’ ಒಂದು ಗಂಭೀರವಾದ ಕೃತಿಯಾಗಿದ್ದು, ಸಾಮಾನ್ಯ ಓದಿಗೆ ದಕ್ಕುವಂಥದ್ದಲ್ಲ. ಮರು ಓದಿದರೆ ಮಾತ್ರ ಈ ಕೃತಿ ಮನನವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಹೇಳಿದರು.

ದ.ಕ.ಜಿಲ್ಲಾ ಸತ್ರ ನ್ಯಾಯಾಲಯ‌ ಸಂಕೀರ್ಣದ 6ನೇ ಮಹಡಿಯ ಸಭಾಂಗಣದಲ್ಲಿ ದ.ಕ. ಜಿಲ್ಲಾ ವಕೀಲರ ಸಂಘ ನಡೆದ ಎಂ.ವೀರಪ್ಪ ಮೊಯ್ಲಿಯವರ ‘ದಿ ವೀಲ್ ಆಫ್ ಜಸ್ಟಿಸ್’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ವೀರಪ್ಪ ಮೊಯ್ಲಿಯವರು ಸಕಲಕಲಾ ವಲ್ಲಭ. ಇವರು ಶಾಸಕರಾಗಿದ್ದವರು, ಕಾನೂನು ಸಚಿವರಾಗಿದ್ದವರು, ಕರ್ನಾಟಕ ಸರ್ಕಾರದ ಇತರ ಖಾತೆಗಳ ಸಚಿವರಾಗಿದ್ದವರು, ಮುಖ್ಯಮಂತ್ರಿಯಾಗಿದ್ದವರು, ಕೇಂದ್ರ ಸರ್ಕಾರದ ಸಚಿವರಾಗಿದ್ದವರು. ಪ್ರಧಾನ ಮಂತ್ರಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಈ ಮೂರು ಪದವಿಗಳು ಮಾತ್ರ ಬಾಕಿ ಇರೋದು. ಈ ಮೂರು ಪದವಿಗಳನ್ನು ಆದಷ್ಟು ಬೇಗ ಅವರು ಅಲಂಕರಿಸಲಿ ಎಂದು ಅವರು ಹೇಳಿದರು.

virappa-moily-2ವೀರಪ್ಪ ಮೊಯ್ಲಿಯವರು ಮಾತನಾಡಿ, ನಾನು ಏನು ಅಪೇಕ್ಷೆ ಪಟ್ಟಿದ್ದೇನೋ ಅದೆಲ್ಲಾ ಈ ಪುಸ್ತಕದಲ್ಲಿದೆ. ನನ್ನ ಪುಸ್ತಕಗಳ ವಿಚಾರವನ್ನೇ ನಾನು ಮತ್ತೆ ಹೇಳುವ ಅವಶ್ಯಕತೆ ಇಲ್ಲ. ನಾನು ರಾಜ್ಯದ ಕಾನೂನು ಸಚಿವನಾಗಿದ್ದ ಸಂದರ್ಭ, ಕೇಂದ್ರದ ಕಾನೂನು ಸಚಿವನಾಗಿದ್ದ ಸಂದರ್ಭ ನನಗಾದ ಅನುಭವಗಳನ್ನು ಸಮೀಕರಿಸಿ, ಸಾಕಷ್ಟು ಸಂಶೋಧನೆ ನಡೆಸಿ, ಬರೆದಿದ್ದೇನೆ. ಬಳಿಕ ಕಾನೂನು ಪಂಡಿತರಲ್ಲಿ ಈ ಪುಸ್ತಕದ ಬಗ್ಗೆ ಚರ್ಚಿಸಿ, ಅವರ ಸಲಹೆಗಳನ್ನು ಕೇಳಿ ಬರೆದಿದ್ದೇನೆ ಎಂದು ಹೇಳಿದರು.

ಈ ಸಂದರ್ಭ ವಕೀಲರ ಸಂಘದ ವತಿಯಿಂದ ವೀರಪ್ಪ ಮೊಯ್ಲಿಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಹಿರಿಯ ನ್ಯಾಯವಾದಿ ವಿಜಯ ಕುಮಾರ್, ದ.ಕ‌. ಜಿಲ್ಲಾ ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಬಲ್ಲಾಳ್, ನ್ಯಾಯವಾದಿ ಪದ್ಮಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.

virappa-moily-3

virappa-moily-4

virappa-moily-5

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English