ಬೆಂಗಳೂರು: ಶೋಭಾ ಕರಂದ್ಲಾಜೆ ಇಂಧನ ಸಚಿವೆಯಾಗಿದ್ದಾಗ 90 ಕೋಟಿ ಅವ್ಯವಹಾರ ಮಾಡಿದ್ದಾರೆ ಎಂದು ನೀತಿ ಟ್ರಸ್ಟ್ ಅಧ್ಯಕ್ಷ ಜಯನ್ ಎಸಿಬಿಗೆ ದೂರು ನೀಡಿದ್ದಾರೆ.
2012-13ನೇ ಸಾಲಿನಲ್ಲಿ AB-LT, AB-HT, ಬಂಜ್ ಕೇಬಲ್ ಕಾಮಗಾರಿಯಲ್ಲಿ ಕೋಟಿ ಕೋಟಿ ಅವ್ಯವಹಾರ ನಡೆದಿದೆ ಎಂದು ಶೋಭಾ ಕರಂದ್ಲಾಜೆ ಹಾಗೂ ಒಟ್ಟು 12 ಜನ ಅಧಿಕಾರಿಗಳ ವಿರುದ್ದ ತನಿಖೆಗೆ ಆಗ್ರಹಿಸಿ ದೂರು ನೀಡಲಾಗಿದೆ.
ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್, ಕನೆಕ್ಟರ್ ಸ್ವಿಚ್ ಖರೀದಿಯಲ್ಲಿ 20 ಸಾವಿರ ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್ ಖರೀದಿ ಮಾಡಿದ್ರು, ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್ ಒಂದರ ಮಾರ್ಕೆಟ್ ರೇಟ್ 800, ಬೆಸ್ಕಾಂ ನಿರ್ಧರಿಸಿದ ದರ 1,987 ರೂಪಾಯಿ ಆದರೆ ಖರೀದಿ ಮಾಡಿರುವುದು 6,000. ಇದರಿಂದ 4,013 ರೂಪಾಯಿ ವ್ಯತ್ಯಾಸ ಕಂಡುಬಂದಿದೆ. ಇನ್ನು 49,000 ಕನೆಕ್ಟರ್ ಖರೀದಿಯಲ್ಲಿಯೂ ಅಕ್ರಮವಾಗಿದೆ. ಒಂದು ಕನೆಕ್ಟರ್ ಮಾರ್ಕೆಟ್ ದರ 80, ಬೆಸ್ಕಾಂ ನಿಗದಿ ಮಾಡಿದ್ದು 152, ಖರೀದಿ ಆಗಿರುವುದು 855 ರೂಪಾಯಿ ಒಂದು ಕನೆಕ್ಟರ್ಗೆ 703 ರೂ. ವ್ಯತ್ಯಾಸ ಕಂಡುಬಂದಿದೆ ಎಂದು ಆರೋಪಿಸಿದರು.
ಇನ್ನು ಕೂಲಿ ನೀಡಿರುವುದರಲ್ಲೂ ಅಕ್ರಮ ಎಸಗಿದ್ದು, ಏಷ್ಯನ್ ಫ್ಯಾಬ್ ಟೆಕ್ ಒಂದು ಡಿಸ್ಟ್ರಬ್ಯೂಷನ್ ಬಾಕ್ಸ್ ಹಾಕುವುದಕ್ಕೆ 15,000 ನಿಗದಿ ಮಾಡಿದೆ. ಆದ್ರೆ ಕಾಮಗಾರಿ ಗುತ್ತಿಗೆ ಪಡೆದಿದ್ದ ಏಷ್ಯನ್ ಫ್ಯಾಬ್ ಟೆಕ್ ಲಿಮಿಟೆಡ್ ಕಂಪನಿ ಮಾರುಕಟ್ಟೆ ದರ ಕ್ಕಿಂತ ಹೆಚ್ಚು ದರ ನೀಡಿ ಸಾಮಾಗ್ರಿ ಖರೀದಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಶೋಭಾ ಅಧಿಕಾರದಲ್ಲಿದ್ದಾಗ ಬೆಸ್ಕಾಂ ಕಾರ್ಯದರ್ಶಿಯಾಗಿರುವ ಎಸ್ ಸೆಲ್ವಕುಮಾರ್ ಮೇಲೂ ಜಯನ್ ದೂರು ನೀಡಿಡಿದ್ದಾರೆ. ಸದ್ಯ ಸಿಎಂ ಆಪ್ತ ಕಾರ್ಯದರ್ಶಿ ಹಾಗೂ ಕೆಪಿಟಿಸಿಎಲ್ ಎಂಡಿಯಾಗಿ ಸೆಲ್ವಕುಮಾರ್ ಕಾರ್ಯ ನಿರ್ವಹಿಸ್ತಿದ್ದಾರೆ.
Click this button or press Ctrl+G to toggle between Kannada and English