ಜಿಲ್ಲೆಯ ಸಂಸ್ಕೃತಿ, ಚರಿತ್ರೆ, ಪರಂಪರೆಯನ್ನು ಅರಿಯಲು ರಸ ಪ್ರೆಶ್ನೆ ಸಹಕಾರಿ: ಸಸಿಕಾಂತ್ ಸೆಂಥಿಲ್

10:00 AM, Thursday, December 27th, 2018
Share
1 Star2 Stars3 Stars4 Stars5 Stars
(No Ratings Yet)
Loading...

sasikanth-senthilಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ‘ಮಂಗಳೂರು ಕ್ವಿಜ್ ಲೀಗ್’ ಹಂತ-1 ಎಂಬ ಸ್ಪರ್ಧೆ ಇಂದು ನಗರದ ಪುರಭವನದಲ್ಲಿ ನಡೆಯಿತು. ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಡೆದ ಈ ಕ್ವಿಜ್ ಸ್ಪರ್ಧೆಯನ್ನು ಇಂದು ಹುಟ್ಟುಹಬ್ಬ ಆಚರಿಸಿಕೊಂಡ ಸರ್ಕಾರಿ ಬಿಎಡ್ ಕಾಲೇಜಿನ ವಿದ್ಯಾರ್ಥಿನಿ ಸುಶ್ಮಿತಾ ಉದ್ಘಾಟಿಸಿದರು.

ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಜೆಲ್ಲೆಯಲ್ಲಿ ಪ್ರವಾಸೋದ್ಯಮವನ್ನು‌ ಅಭಿವೃದ್ಧಿಪಡಿಸಲು‌ ವಿವಿಧ ಯೋಜನೆಯನ್ನು ಕೈಗೊಂಡಿದ್ದು, ಇದರಲ್ಲಿ ಇಂದು ಆಯೋಜನೆಗೊಂಡಿರುವ ಕ್ವಿಜ್ ಕಾರ್ಯಕ್ರಮವೂ ಒಂದು. ಇಲ್ಲಿ ಕೇಳಲಾಗುವ ಪ್ರಶ್ನೆಗಳಿಂದ ಎಲ್ಲರ ಸಾಮಾನ್ಯ ಜ್ಞಾನ ಉತ್ತಮವಾಗಲು ಸಾಧ್ಯವಾಗುತ್ತದೆ. ಅಲ್ಲದೇ ನಮ್ಮ ಜಿಲ್ಲೆಯ ಸಂಸ್ಕೃತಿ, ಚರಿತ್ರೆ, ಪರಂಪರೆಯನ್ನು ಅರಿಯುವ ನಿಟ್ಟಿನಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರಿಂದ ಈ ಬಗೆಗೆ ಗೊತ್ತಿಲ್ಲದಿರುವ ವಿಷಯಗಳು ತಿಳಿಯುತ್ತದೆ. ಎಲ್ಲರೂ ಉತ್ತಮ ರೀತಿಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಎಂದು ಹೇಳಿದರು.

ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನದಲ್ಲಿ ಸ್ಪರ್ಧೆ ನಡೆದರೆ, ಸಾರ್ವಜನಿಕರಿಗೆ ಪ್ರವಾಸಿ ತಾಣಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಮೊದಲಿಗೆ 20 ಪ್ರಶ್ನೆಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಕೇಳಲಾಗುತ್ತದೆ. ಅದರಲ್ಲಿ ವಿಜೇತರಾದ 6 ಜೋಡಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇವರಿಗೆ ಮತ್ತೆ ಆರು ಸುತ್ತಿನಲ್ಲಿ ಪ್ರಶ್ನೆ ಕೇಳಲಾಗುತ್ತದೆ. ಅದರಲ್ಲಿ ಉತ್ತಮ ನಿರ್ವಹಣೆ ಮಾಡಿದ ಮೂರು ಜೋಡಿಗಳು ವಿಜೇತರಾಗುತ್ತಾರೆ.

ನೇತ್ರಾವತಿ ಎಕ್ಸ್ಪ್ರೆಸ್ ವಿಭಾಗದ ಕ್ವಿಜ್ ಕಾಲೇಜು ವಿಭಾಗದಲ್ಲಿ ನಡೆದಿದ್ದು, ಇದರಲ್ಲಿ ಮೊದಲ ಬಹುಮಾನ ಪಿಇಎಸ್ ಕಾಲೇಜ್, ಎರಡನೇ ಬಹುಮಾನ ಎನ್ಐಟಿಕೆ ಕಾಲೇಜ್‌ ಸುರತ್ಕಲ್, ಮೂರನೇ ಬಹುಮಾನ‌ ಪುತ್ತೂರು ವಿವೇಕಾನಂದ ಕಾಲೇಜ್‌ ಪಡೆದುಕೊಂಡಿತು.

ಮಂಗಳಾ ಎಕ್ಸ್ಪ್ರೆಸ್ನ ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ರಜತ್ ಶೆಟ್ಟಿ, ದ್ವಿತೀಯ ಬಹುಮಾನವನ್ನು ಡಾ. ಅನಿಲ್ ಶೆಟ್ಟಿ ಮತ್ತು ವಿಕಾಸ್ ಮೂಡುಬಿದಿರೆ ಹಾಗೂ ಮೂರನೇಯ ಬಹುಮಾನವನ್ನು ವಿಶ್ವಾಸ್ ಕೆ. ಪೈ ಮತ್ತು ಅಣ್ಣಪ್ಪ ಕಾಮತ್ ಪಡೆದುಕೊಂಡರು. ಮಹಾನಗರ ಪಾಲಿಕೆಯ ಆಯುಕ್ತ ಮೊಹಮ್ಮದ್ ನಜೀರ್ ವಿಜೇತರಿಗೆ ಬಹುಮಾನ ವಿವರಿಸಿದರು. ಕೇರಳದ ಕ್ಯೂ ಫ್ಯಾಕ್ಟರಿ ಖ್ಯಾತಿಯ ಸ್ನೇಹಜ್ ಶ್ರೀನಿವಾಸ್ ಅವರು ಈ ಕ್ವಿಜ್ ಸ್ಪರ್ಧೆಯನ್ನು ನಡೆಸಿಕೊಟ್ಟರು.

sasikanth-senthil-2

sasikanth-senthil-3

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English