ಸುಳ್ಯ: ಮದುವೆಯ ನಿಮಿತ್ತ ಶಾಮಿಯಾನ ಹಾಕುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೋರ್ವ ಮೃತಪಟ್ಟ ಘಟನೆ ದ.ಕ. ಜಿಲ್ಲೆಯ ಎಲಿಮಲೆ ಎಂಬಲ್ಲಿ ಸಂಭವಿಸಿದೆ.
ಸುಳ್ಯ ತಾಲೂಕಿನ ಎಲಿಮಲೆ ಸಮೀಪದ ಉಳಿಯ ನಿವಾಸಿ ದಿ.ಸತ್ಯನಾರಾಯಣ ಗೌಡ ಎಂಬವರ ಪುತ್ರ ಪ್ರೀತೇಶ್ (19) ಮೃತಪಟ್ಟ ಯುವಕ. ಈತ ಮನೆಯೊಂದರಲ್ಲಿ ನಡೆಯುತ್ತಿರುವ ಮದುವೆ ನಿಮಿತ್ತ ಶಾಮಿಯಾನ ಹಾಕುತ್ತಿರುವ ವೇಳೆ ವಿದ್ಯುತ್ ತಂತಿ ತಗುಲಿ ಸಂಭವಿಸಿದೆ ಎಂದು ತಿಳಿದುಬಂದಿದೆ.
ಇನ್ನು ಮನೆಗೆ ಆಧಾರವಾಗಿದ್ದ ಏಕೈಕ ಪುತ್ರನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.
Click this button or press Ctrl+G to toggle between Kannada and English