ಮಂಗಳೂರು : ನಕ್ಸಲ್ ಬೆಂಬಲಿತ ಆರೋಪಿ ವಿಠಲ ಮಲೆಕುಡಿಯ ವಿವಿ ಪತ್ರಿಕೋದ್ಯಮದ ಎರಡನೆಯ ಸೆಮಿಸ್ಟರ್ ನ ಆಂತರಿಕ ವಿಷಯದ ಪರೀಕ್ಷೆಯನ್ನು ಇಂದು ಪೊಲೀಸ್ ಬೆಂಗಾವಲಿನಲ್ಲಿ ಬರೆದಿದ್ದಾನೆ.
ಮಾರ್ಚ 3 ರಂದು ಬೆಳ್ತಂಗಡಿಯ ಕುತ್ಲೂರಿನಲ್ಲಿ ನಕ್ಸಲ್ ಬೆಂಬಲಿಗ ಎಂಬ ಆರೋಪದ ಮೇಲೆ ಬೆಳ್ತಂಗಡಿ ನಕ್ಸಲ್ ವಿರೋಧಿ ಪಡೆ ಆತನನ್ನು ಮತ್ತು ಆತನ ತಂದೆಯನ್ನು ಬಂಧಿಸಿತ್ತು. ಕಳೆದ ಶುಕ್ರವಾರರ ಸಲ್ಲಿಸಿದ ಅರ್ಜಿಯನ್ನು ಕೈಗೆತ್ತಿಗೊಂಡ ನ್ಯಾಯಾಲಯ ವಿಠಲ್‌ಗೆ ವಿವಿಯ ಆಂತರಿಕ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಬಹುದು. ಜೈಲು ಅಧಿಕಾರಿಗಳು ಬೆಂಗಾವಲ ಪಡೆಯೊಂದಿಗೆ ವಿಠಲನನ್ನು ಕಳುಹಿಸಿ ಕೊಡಬಹುದು ಎಂದು ನಿರ್ದೇಶನ ನೀಡಿದೆ. ಇದರಂತೆ ವಿದ್ಯಾರ್ಥಿ ವಿಠಲನಿಗೆ ಪರೀಕ್ಷೆ ಬರೆಯಲು ಬೆಳ್ತಂಗಡಿ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.
ಇದಕ್ಕೆ ಪೊಲೀಸರು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಡಿಜಿ ಐಜಿಪಿಇನ್ಫಾಂಟ್ ಸ್ಪಷ್ಟಪಡಿಸಿದ್ದಾರೆ. ಜೈಲು ಅಧಿಕಾರಿಗಳಿಗೆ ಈಗಾಗಲೇ ಫ್ಯಾಕ್ಸ್ ಮೂಲಕ ಇದನ್ನು ರವಾನಿಸಲಾಗಿದೆ. ವಿಠಲ್ ಕೂಡ ಪರೀಕ್ಷೆ ಬರೆಯಲು ಉತ್ಸುಕನಾಗಿದ್ದಾನೆ. ಜೈಲಿನಲ್ಲಿ ಸಮಯ ಸಿಕ್ಕಾಗಲೆಲ್ಲ ಓದಿನಲ್ಲಿ ಮುಳುಗಿರುತ್ತಾನೆ ಎಂದು ಅವರು ಹೇಳಿದ್ದಾರೆ.
ಕಳೆದ ವಾರ ಪುತ್ತೂರು ಫಾಸ್ಟ್ ಟ್ರ್ಯಾಕ್ ಕೋರ್ಟ್ ಕಾನೂನು ವಿರೋಧಿ ಚಟುವಟಿಕೆ ತಡೆ ಕಾಯ್ದೆಯಡಿ ಬಂಧಿತನಾಗಿರುವ ವಿಠಲನಿಗೆ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಇದರಿಂದಾಗಿ ಸೋಮವಾರದ ಮೊದಲ ಪರೀಕ್ಷೆಗೆ ಹಾಜರಾಗಲು ಸಾಧ್ಯಾವಾಗಿಲ್ಲ. ಏಪ್ರಿಲ್ 17,18,19 ಮತ್ತು 2೦ ರಂದು ವಿಠಲನಿಗೆ ಪರೀಕ್ಷೆ ಬರೆಯಲು ಮಂಗಳೂರು ಸಬ್ ಜೈಲ್ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ.
ಐದು ಪೊಲೀಸರ ಬಿಗು ಬೆಂಗಾವಲಿನಲ್ಲಿ ಪರೀಕ್ಷೆ ಬರೆದ ವಿಠಲನನ್ನು ಉತ್ತರ ಪತ್ರಿಕೆ ನೀಡಿದ ಬಳಿಕ ಪೊಲೀಸ್ ಜೀಪಿನಲ್ಲಿ ಮತ್ತೆ ಜೈಲಿಗೆ ಕೊಂಡೊಯ್ಯಲಾಯಿತು.
Click this button or press Ctrl+G to toggle between Kannada and English