ಮಂಗಳೂರು : ಸುವರ್ಣ ನ್ಯೂಸ್ ಚಾನಲ್‌ನ ನಿರೂಪಕರಾದ ಅಜಿತ್ ರವರು ಪ್ರೊಫೆಸರ್ ಭಗವಾನ್ ರವರು ಈ ಹಿಂದೆ ಒಂದು ಸಮುದಾಯದ ಆದರ್ಶ ಪುರುಷರ ಬಗ್ಗೆ ಅವಹೇಳನಕಾರಿಯಾಗಿ ಪ್ರಸ್ತಾಪಿಸಿದನ್ನು ಟಿ.ವಿಯಲ್ಲಿ ವಿಶ್ಲೇಷಿಸುವಾಗ ಇಸ್ಲಾಮಿನ ಪ್ರವಾದಿಯವರ ಬಗ್ಗೆ ನಿಂದನಾತ್ಮಕವಾಗಿ ಪ್ರಸ್ತಾಪಿಸಿರುವುದನ್ನು ದ.ಕ ಜಿಲ್ಲಾ ಟಿಪ್ಪು ಸುಲ್ತಾನ್ ಮಹಾವೇದಿಕೆ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಪ್ರೊಫೆಸರ್ ಭಗವಾನ್ ರವರ ಹೇಳಿಕೆಯನ್ನು ವಿಶ್ಲೇಷಿಸುವ ಭರದಲ್ಲಿ ನಿರೂಪಕ ಅಜಿತ್‌ರವರು ಮುಸ್ಲಿಮ್ ಸಮುದಾಯದವರೊಂದಿಗೆ ಸರ್ವ ಧರ್ಮದವರು ಗೌರವಿಸುವ ಪ್ರವಾದಿ ಮಹಮ್ಮದ್‌ರ ಜೀವನ ಕ್ರಮದ ಅಸಹನೆಯ ಸಿದ್ಧಾಂತ ಭಯೋತ್ಪಾದಕ ಟಿಪ್ಪು ಹುಟ್ಟಿಕೊಳ್ಳಲು ಕಾರಣ ಎಂಬಿತ್ಯಾದಿಯಾಗಿ ಪ್ರವಾದಿ ನಿಂದನೆಗೊಳಿಸಿರುವುದು ಅಕ್ಷಮ್ಯ ಅಪರಾಧವಾಗಿರುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆ ನಿರೂಪಕ ಅಜಿತ್ ವಿರುದ್ದ ಪ್ರಕರಣ ದಾಖಲಿಸಬೇಕೆಂದು ಎಂದು ಟಿಪ್ಪು ಸುಲ್ತಾನ್ ಮಹಾವೇದಿಕೆ ದ.ಕ ಜಿಲ್ಲಾ ಸಮಿತಿ ಪ್ರಕಟಣೆ ತಿಳಿಸಿದೆ.
Click this button or press Ctrl+G to toggle between Kannada and English