ಮಣ್ಣು ಖಾಲಿ ಮಾಡುವ ವೇಳೆ ವಿದ್ಯುತ್​ ಸ್ಪರ್ಶ: ಟಿಪ್ಪರ್​​ ಬೆಂಕಿಗಾಹುತಿ

10:00 AM, Saturday, December 29th, 2018
Share
1 Star2 Stars3 Stars4 Stars5 Stars
(No Ratings Yet)
Loading...

mangaluruಮಂಗಳೂರು: ಟಿಪ್ಪರ್ ಮಣ್ಣು ಖಾಲಿ ಮಾಡುವ ಸಂದರ್ಭದಲ್ಲಿ ಟಿಪ್ಪರ್ ಹೈಟೆನ್ಷನ್ ವಿದ್ಯುತ್ ತಂತಿಗೆ ಸ್ಪರ್ಶಿಸಿದ ಪರಿಣಾಮ ಬೆಂಕಿಗಾಹುತಿಯಾದ ಘಟನೆ ನಗರ ಹೊರವಲಯದ ಅಡ್ಯಾರ್ನಲ್ಲಿ ನಡೆದಿದೆ.

ನೇರಳಕಟ್ಟೆಯ ಯಶೋಧರ್ ಎಂಬುವರಿಗೆ ಸೇರಿದ ಟಿಪ್ಪರ್ ಮಣ್ಣು ಖಾಲಿ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿದೆ. ತಕ್ಷಣವೇ ಟಿಪ್ಪರ್ನ ಟೈಯರ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಟಿಪ್ಪರ್ನಲ್ಲಿದ್ದ ಚಾಲಕ ಕೂಡಲೇ ಇಳಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕೂಡಲೇ ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English