ಮಸಾಜ್ ಮಾಡುವ ನೆಪದಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ವ್ಯಕ್ತಿ ಬಂಧನ

11:48 AM, Saturday, December 29th, 2018
Share
1 Star2 Stars3 Stars4 Stars5 Stars
(No Ratings Yet)
Loading...

arrestedಮೈಸೂರು: ಉಚಿತವಾಗಿ ಮಸಾಜ್ ಮಾಡುವ ನೆಪದಲ್ಲಿ ಗ್ರಾಹಕರನ್ನು ಕರೆಸಿ, ಅವರಿಗೆ ಮತ್ತು ಬರುವ ಔಷಧಿ ನೀಡಿ, ಚಿನ್ನಾಭರಣ, ನಗದು ದೋಚಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳದ ಮಲಾಪುರಂ ಜಿಲ್ಲೆಯ ಪೆರಿಂತಲ್ ಮನ್ನಾ ತಾಲೂಕಿನ ಅನಮಂಗಾಡ್ ಗ್ರಾಮದ ಕೆ.ಪಿ.ಸುಮೇಶ್ ಎಂಬುವವನೇ ಬಂಧಿತ ವ್ಯಕ್ತಿ. ಮಸಾಜ್ ಮಾಡುವ ನೆಪದಲ್ಲಿ ಈತ ಗ್ರಾಹಕರ ಚಿನ್ನಾಭರಣ , ಹಣ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಈತನಿಂದ 6.10 ಲಕ್ಷ ರೂ. ಮೌಲ್ಯದ 203 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಮಸಾಜ್ ಮಾಡುವುದಾಗಿ ಫೋನ್ ಮೂಲಕ ಗ್ರಾಹಕರನ್ನು ತಾನು ತಂಗಿದ್ದ ಲಾಡ್ಜ್ಗೆ ಕರೆಸಿಕೊಂಡು ಅವರಿಗೆ ಮತ್ತು ಬರುವ ಪದಾರ್ಥಗಳನ್ನು ಪಾನೀಯಗಳಲ್ಲಿ ಬೆರೆಸಿ ಕೊಡುತ್ತಿದ್ದ.

ಗ್ರಾಹಕರು ನಿದ್ದೆಗೆ ಜಾರಿದಾಗ ಅವರ ಚಿನ್ನಾಭರಣ ಮತ್ತು ಹಣವನ್ನು ಕಳ್ಳತನ ಮಾಡುತ್ತಿದ್ದ. ಈತನ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮೊಬೈಲ್ ನಂಬರ್ ಜಾಡು ಹಿಡಿದು ಕೇಶವ ಅಯ್ಯಂಗಾರ್ ರಸ್ತೆಯ ಭಾಗ್ಯಲಕ್ಷ್ಮಿ ಲಾಡ್ಜ್ನಲ್ಲಿ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಮೈಸೂರು, ಹಾಸನ, ಬೆಂಗಳೂರು, ಮಂಡ್ಯ ಮತ್ತು ಕೋಲಾರಗಳಲ್ಲಿ ಮೊಬೈಲ್ ಆಪ್ಲಿಕೇಷನ್ ಮೂಲಕ ಈತ ಗ್ರಾಹಕರನ್ನು ಸಂಪರ್ಕಿಸಿ, ದರೋಡೆ ಮಾಡುತ್ತಿದ್ದ ಎನ್ನಲಾಗಿದೆ.

ಈತನಿಂದ 6.10 ಲಕ್ಷ ರೂ. ಮೌಲ್ಯದ 203 ಗ್ರಾಂ ಚಿನ್ನಾಭರಣ ಹಾಗೂ 1720 ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈತನ ಬಂಧನದಿಂದ ಮತ್ತು 10 ಪ್ರಕರಣಗಳು ( ಮೈಸೂರಿನ ಲಷ್ಕರ್ -3, ಹಾಸನ-2, ಬೆಂಗಳೂರು-3, ಮಂಡ್ಯ-1, ಕೋಲಾರ-1) ಪತ್ತೆಯಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English