ಮಧುಕರ್ ಶೆಟ್ಟಿ ನಿಧನ ಆಘಾತ ತಂದಿದೆ.. ಸಾವಿನ ಬಗ್ಗೆ ತನಿಖೆ ಅಗತ್ಯವಿದೆ: ಡಿ.ಕೆ. ಶಿವಕುಮಾರ್

1:44 PM, Saturday, December 29th, 2018
Share
1 Star2 Stars3 Stars4 Stars5 Stars
(No Ratings Yet)
Loading...

congressಬೆಂಗಳೂರು: ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನ ಆಘಾತ ತಂದಿದೆ. ಸಾವಿನ ಬಗ್ಗೆ ತನಿಖೆ ಅಗತ್ಯವಿದೆ. ಯಾಕೆ, ಏನಾಯ್ತು ಅನ್ನೋದು ತಿಳಿಯಬೇಕು ಎಂದು ಸಚಿವ ಡಿ.ಕೆ. ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ, ಅವರು ನನಗೆ ಬಹಳ ಹತ್ತಿರದಿಂದ ಪರಿಚಯ. ರಾತ್ರಿ ಸುದ್ದಿ ಕೇಳಿ ದುಖಃವಾಯ್ತು. ಅವರು ನಮ್ಮ ಪೊಲೀಸ್ ಇಲಾಖೆಗೆ ದೊಡ್ಡ ಆಸ್ತಿ. ಸಾವಿನ ತನಿಖೆಯಿಂದ ಸಾಕಷ್ಟು ಸತ್ಯಗಳು ಹೊರಬರಬಹುದು ಎಂದು ಹೇಳಿದ್ದಾರೆ.

ಸಚಿವ ಸ್ಥಾನ, ನಿಗಮ ಮಂಡಳಿಯಲ್ಲಿ ಅವಕಾಶ ಸಿಗಲಿಲ್ಲವೆಂದು ಅಸಮಾಧಾನಗೊಂಡಿರುವವರ ಬಗ್ಗೆ ಮಾತನಾಡಿ, ಇದು ಕಾಂಗ್ರೆಸ್ ಪಾರ್ಟಿ. ಯಾರ ಮೇಲೆ ಟೋಪಿ ಇಟ್ಟರು ಅದಕ್ಕೆ ಅವರು ಬದ್ಧರಾಗಿರಬೇಕು. ಪಕ್ಷ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮಾಡಿದೆ. ನನಗೂ ಆಕಾಶದಲ್ಲಿ ತೇಲಾಡಬೇಕೆಂಬ ಆಸೆಯಿದೆ. ಆದರೆ ಕೆಲವೊಂದು ಇತಿಮಿತಿಗಳನ್ನೂ ಹಾಕಿಕೊಳ್ಳಬೇಕು ಎಂದರು.

ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ಹೆಚ್.ಕೆ.ಪಾಟೀಲ್ ಅವರಿಗೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಪ್ರಚಾರ ಸಮಿತಿ ಹೋಯ್ತು ಅಂತ ಬೇಜಾರಾಗೋಕೆ ಸಾಧ್ಯವೇ? ಈಗ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ಹೆಚ್.ಕೆ.ಪಾಟೀಲ್ ಅವರಿಗೆ ನೀಡಲಾಗಿದೆ. ಅದಕ್ಕೆ ನನ್ನಿಂದ ಕಿತ್ತು, ಅವರಿಗೆ ಕೊಟ್ರು ಅಂತ ಅನ್ನೋಕೆ ಆಗುತ್ತಾ? ಮುಂದೆ ಪಕ್ಷದಲ್ಲಿ ಎಲ್ಲರಿಗೂ ಉತ್ತಮ ಅವಕಾಶ ಸಿಗಲಿದೆ, ಅದಕ್ಕೆ ಕಾಯಬೇಕು ಎಂದರು.

ಪರಮೇಶ್ವರ್ಗೆ ಗೃಹ ಖಾತೆ ಇರಬೇಕಿತ್ತು ಎಂಬ ಹೆಚ್‍.ಡಿ. ರೇವಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ನಾನು ಬೇರೆಯವರ ಮಾತಿಗೆಲ್ಲ ಉತ್ತರ ಕೊಡೋಕೆ ಆಗಲ್ಲ. ಸಿಎಂ ಹೇಳಿದ ಮೇಲೆ ಅದೇ ಫೈನಲ್. ಹೈಕಮಾಂಡ್ ಹೇಳಿದ ಮೇಲೆ ನಮ್ಮಲ್ಲಿ ಅದೇ ಫೈನಲ್. ಯಾರೋ ಹೇಳಿದ್ರು ಅಂತ ಎಲ್ಲದಕ್ಕೂ ಉತ್ತರಿಸೋಕೆ ಆಗಲ್ಲ ಎಂದರು.

ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಕತ್ತಿ ಹೇಳಿಕೆ ವಿಚಾರ ಪ್ರಸ್ತಾಪಿಸಿ, ಅವರ ಬಳಿ ನಾನು ಜ್ಯೋತಿಷ್ಯ ಕೇಳಬೇಕು. ಉಮೇಶ್ ಕತ್ತಿಯವರು ಟೈಮ್ ಕೊಟ್ಟರೆ ಅವರಿಂದ ಕೇಳಬೇಕು. ಅವರನ್ನ ಭೇಟಿ ಮಾಡಿದ ನಂತರ ಅದರ ಬಗ್ಗೆ ಹೇಳುತ್ತೇನೆ ಎಂದು ವ್ಯಂಗ್ಯವಾಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English