ಮಂಗಳೂರು : ಇತ್ತೀಚೆಗೆ ಬೆಂಗಳೂರು ಪ್ರಸಾದಿತ ಸುವರ್ಣ ನ್ಯೂಸ್ ಟಿ.ವಿ ವಾಹಿನಿಯ ನಿರೂಪಕ ಅಜಿತ್ ಹನುಮಕ್ಕನವರ್ ಟಿ.ವಿ ಸಂವಾದ ಕಾರ್ಯಕ್ರಮವೊಂದರಲ್ಲಿ ಇತರ ವಿಷಯಗಳನ್ನು ಪ್ರಸ್ತಾಪ ಮಾಡುವಾಗ ಜಗತ್ತಿನ ಸರ್ವ ಮುಸ್ಲಿಮರೊಂದಿಗೆ ಸಹ ಸಮುದಾಯ ಬಾಂಧವರೂ ಕೂಡಾ ಗೌರವಿಸುವ ಪ್ರವಾದಿ ಮೊಹಮ್ಮದ್ ರವರನ್ನು ನಿಂದಿಸಿ ಅವಹೇಳನೆಯಾಗುವಂತಹ ಹೇಳಿಕೆಗಳನ್ನು ನೀಡಿ, ಒಂದು ನಿರ್ದಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಲು ಪ್ರಯತ್ನಿಸಿದ್ದು, ವಿಭಿನ್ನ ಮತೀಯರ ಮಧ್ಯೆ ಕೋಮುದ್ವೇಷ ಸೃಷ್ಟಿಸುವಂತಹ ಅಪರಾಧ ಕೃತ್ಯವನ್ನು ಎಸಗಿರುತ್ತಾರೆ. ಈ ಘಟನೆಯಿಂದಾಗಿ ಸಾರ್ವಜನಿಕರ ಮನಸ್ಸಿಗೆ ತೀವ್ರ ನೋವಾಗಿರುತ್ತದೆ. ಈ ಕೃತ್ಯಕ್ಕಾಗಿ ತಪ್ಪಿತಸ್ಥ ನಿರೂಪಕ ಅಜಿತ್ ಹನುಮಕ್ಕನವರ್ ಮತ್ತು ಟಿ.ವಿ ವ್ಯವಸ್ಥಾಪಕರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಮೀನು ಮಾರಾಟ ಮತ್ತು ಕಮಿಷನ್ ಏಜೆಂಟ್ರ ಸಂಘ (ರಿ) ಮಂಗಳೂರು ಇದರ ಅಧ್ಯಕ್ಷರಾದ ಸಿ.ಎಂ ಮುಸ್ತಫಾ ಒತ್ತಾಯಿಸಿರುತ್ತಾರೆ.
Click this button or press Ctrl+G to toggle between Kannada and English
January 4th, 2019 at 14:01:23
ಉತ್ತ ಮ ವರದಿ